ತಾವರಗೇರಾದಲ್ಲಿ ಸ್ವಚ್ಛತಾ ಸಪ್ತಾಹ ಜಾಥಾ ಕಾರ್ಯಕ್ರಮ ನಡೆಯಿತು.  
ಜಿಲ್ಲೆ

ಆರೋಗ್ಯಕ್ಕಾಗಿ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಪಪಂ ಮುಖ್ಯಾಧಿಕಾರಿ ನಬೀಸಾಬ ಸಲಹೆ

ತಾವರಗೇರಾ: ಸ್ಥಳೀಯ ಕರ್ನಾಟಕ ಪಬ್ಲಿಕ್ ಶಾಲೆಯ ಮಕ್ಕಳು ಬುಧವಾರ ಸ್ವಚ್ಛತಾ ಸಪ್ತಾಹ ಅಂಗವಾಗಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಿದರು. ಶಾಲೆ ಮೈದಾನದಿಂದ ಹೊರಟ ಜಾಥಾ ಪ್ರಮುಖ ರಸ್ತೆ ಮೂಲಕ ಪಪಂ ಕಚೇರಿವರೆಗೆ ನಾಮ ಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗುತ್ತ ಜಾಥಾ ನಡೆಸಿದರು. ಬಳಿಕ ಮಾತನಾಡಿದ ಪಪಂ ಮುಖ್ಯಾಧಿಕಾರಿ ನಬೀಸಾಬ ಖುದನವರ್, ಎಲ್ಲರೂ ಆರೋಗ್ಯದಿಂದ ಇರಲು ಸ್ವಚ್ಛತೆ ನಾವು ಆದ್ಯತೆ ನೀಡಬೇಕು ಎಂದರು.

ಶ್ಯಾಮೂರ್ತಿ ಕಟ್ಟಿಮನಿ, ದೈಹಿಕ ಶಿಕ್ಷಣ ಶಿಕ್ಷಕ ಪರಸಪ್ಪ ಹೊಸಮನಿ, ಶಿಕ್ಷಕರಾದ ಮಲಂಗಸಾ, ಶಾಮಣ್ಣ , ಮರೇಶ ಇದ್ದರು. ಜಿಪಂ ಉಪ ನಿರ್ದೇಶಕ, ಸಾಕ್ಷರತಾ ಇಲಾಖೆ, ಶಿಕ್ಷಣ ಇಲಾಖೆ, ತಾಲೂಕು ಬಿಇಒ ಕಚೇರಿ, ಕ್ಷೇತ್ರ ಸಮನ್ವಯಾಧಿಕಾರಿ ಹಾಗೂ ಪಟ್ಟಣ ಪಂಚಾಯಿತಿ ಆಡಳಿತ ಇವರ ಆಶ್ರಯದಲ್ಲಿ, ಸ್ವಚ್ಛತೆಗಾಗಿ ಸಂಯುಕ್ತ ಭಾರತ ಕಾರ್ಯಕ್ರಮದಡಿ ಸ್ವಚ್ಛತಾ ಸಪ್ತಾಹ ಕಾರ್ಯಕ್ರಮ ಜಾಥಾ ನಡೆಸಲಾಯಿತು.