ತಾವರಗೇರಾ: ಕೊಪ್ಪಳ ವಿವಿ ವ್ಯಾಪ್ತಿಗೆ ಬರುವ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ವರ್ಷದ ಬಿಎ, ಬಿಕಾಂ ವಿದ್ಯಾರ್ಥಿಗಳು 2024-25ನೇ ಸಾಲಿನ ಎನ್ನೆಸ್ಸೆಸ್ ಶಿಬಿರ ಆಯೋಜಿಸುವಂತೆ ಒತ್ತಾಯಿಸಿ ಪ್ರಾಚಾರ್ಯೆ ಟಿ.ಅರುಣಾ ಕುಮಾರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ವಿದ್ಯಾರ್ಥಿ ಕಾರ್ತಿಕ್ ಮಾತನಾಡಿ, 2023-24ನೇ ಸಾಲಿನಲ್ಲಿ ವಿವಿಯಿಂದ ಎನ್ನೆಸ್ಸೆಸ್ ಶಿಬಿರ ಆಯೋಜಿಸಿಲ್ಲ. ಆದ್ದರಿಂದ ಈ ವರ್ಷ ಶಿಬಿರ ಆಯೋಜಿಸಲು ಈಗಾಗಲೇ ಪ್ರಾಚಾರ್ಯರಿಗೆ ಮನವಿ ಸಲ್ಲಿಸಿದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.
ಪ್ರಾಚಾರ್ಯೆ ಟಿ.ಅರುಣಾ ಕುಮಾರಿ ಮಾತನಾಡಿ, ಈಗಾಗಲೇ ವಿವಿಗೆ ಮನವಿ ಸಲ್ಲಿಸಿದ್ದು, ಅನುಮತಿ ನೀಡಿದ ತಕ್ಷಣ ಶಿಬಿರ ಆಯೋಜಿಸಲಾಗುವುದು ಎಂದರು.