ತಾವರಗೇರಾದ ಸರ್ಕಾರಿ ಡಿಗ್ರಿ ಕಾಲೇಜಿನಲ್ಲಿ ನಡೆದ ಜನಪದ ಉತ್ಸವದಲ್ಲಿ ವಿದ್ಯಾರ್ಥಿಗಳು ಗ್ರಾಮೀಣ ಸೊಗಡಿನ ವಿವಿಧ ಕಲೆಗಳನ್ನು ಪ್ರದರ್ಶಿಸಿದರು.  
ಜಿಲ್ಲೆ

ಬದುಕಿನ ಮೌಲ್ಯ ಒಳಗೊಂಡ ಸಾಹಿತ್ಯ

ತಾವರಗೇರಾ: ಇಲ್ಲಿನ ಸರ್ಕಾರಿ ಡಿಗ್ರಿ ಕಾಲೇಜು ಆವರಣದಲ್ಲಿ ಗುರುವಾರ ಕಾಲೇಜು ವತಿಯಿಂದ ಜನಪದ ಉತ್ಸವ ಕಾರ್ಯಕ್ರಮ ನಡೆಯಿತು.

ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಷ್ಕೃತ ಎಚ್. ಚಂದ್ರಶೇಖರ ಲಿಂಗದಹಳ್ಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜನ ಬಾಯಿಂದ ಬಾಯಿಗೆ ಹರಿದು ಬಂದ ಜನಪದ ಸಾಹಿತ್ಯಕ್ಕೆ ಜೀವಂತಿಕೆ ಇದ್ದು, ಬದುಕಿನ ಮೌಲ್ಯಗಳನ್ನು ಒಳಗೊಂಡಿದೆ. ಇದಕ್ಕೆ ಜಾತಿ, ಧರ್ಮದ ಭೇದವಿಲ್ಲ ಎಂದರು.

ಕಾಲೇಜಿನ ಸಾಂಸ್ಕೃತಿಕ ಘಟಕದ ಸಂಚಾಲಕ ಪ್ರೊ.ಡಾ.ವೆಂಕಟೇಶ, ಸುಬ್ರಮಣ್ಯ, ಡಾ.ಉಮಾಕಾಂತ, ಗುರುರಾಜ, ಏಜಾಜ ಹುಸೇನ, ಡಾ.ಯಮನೂರಪ್ಪ, ಲಾಲಸಾಬ, ರಾಘವೇಂದ್ರರಡ್ಡಿ, ಅಡವಿಭಾವಿ ಗ್ರಾಮದ ಮುಖಂಡರಾದ ಮರಿಯಪ್ಪ ಸಿಂಗ್ರಿ, ಸಂಕಮ್ಮ, ಹುಲ್ಲಪ್ಪ, ಶಾಂತಮ್ಮ, ಕಲ್ಯಾಣಪ್ಪ, ಭೀಮನಗೌಡ ಪಾಟೀಲ ಇತರರಿದ್ದರು. ಕಾಲೇಜಿನ ಪ್ರಾಚಾರ್ಯೆ ಅರುಣಾ ಕುಮಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕಿ ಶಶಿಕಲಾ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.