ತಾವರಗೇರಾ: ಪ್ರಕೃತಿ ವಿಕೋಪ, ಜಗಳ, ಅವಘಡ ಸಂಭವಿಸಿದರೆ 112ಕ್ಕೆ ಕರೆ ಮಾಡಿ ಎಂದು ಪಿಎಸ್‌ಐ ಮಲ್ಲಪ್ಪ ವಜ್ರದ ಮಾತನಾಡಿದರು. ಇಲ್ಲಿನ ಶಾಮೀದಲಿ ಸರ್ಕಲ್‌ನಲ್ಲಿ 112 ತುರ್ತು ವಾಹನಗಳ ಬಗ್ಗೆ ಹಮ್ಮಿಕೊಂಡಿದ್ದ ಜಾಗೃತಿ ಕರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು.
ಜಗಳ ನಡೆದ ವೇಳೆ 112ಕ್ಕೆ ಕರೆ ಮಾಡಿದರೆ 15 - 20 ನಿಮಿಷದಲ್ಲಿ ಘಟನಾ ಸ್ಥಳದಲ್ಲಿ ಸಿಬ್ಬಂದಿ ಇರಲಿದ್ದಾರೆ. ಸಮಸ್ಯೆ ತಿಳಿದು ಪರಿಹರಿಸಲು ಯತ್ನಿಸಲಾಗುತ್ತದೆ. ಜನರು ವಾಹನ ಮಹತ್ವ ತಿಳಿದು ಅದರ ಉಪಯೋಗ ಪಡೆದುಕೊಳ್ಳಬೇಕೆಂದರು. ಸಿಬ್ಬಂದಿ ಕೆ.ಆದೇಶ, ಕರಿಯಪ್ಪ , ಮಹಮದ್ ರಫೀ, ಶಂಕರಸಿಂಗ್, ನಾರಾಯಣ ಸಿಂಗ್, ಚಂದ್ರಯ್ಯ ಕಲ್ಮಠ, ರಾಮಣ್ಣ, ಶಾಮಣ್ಣ ಇದ್ದರು.