ಅರಕಲಗೂಡು: ತಾಲೂಕಿನ ರಾಗಿಮರೂರು ಬಳಿ ಚಲಿಸುತ್ತಿದ್ದ ಮಿನಿ ಟಾಟಾ ಏಸ್ ವಾಹನ ಕೆರೆಗೆ ಬಿದ್ದು, ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾಮನಾಥಪುರ ಕಡೆಯಿಂದ ಬೆಟ್ಟದಪುರ ಕಡೆಗೆ ಔಷಧಗಳನ್ನು ಸಾಗಿಸುತ್ತಿದ್ದ ವಾಹನ ನಿಯಂತ್ರಣ ತಪ್ಪಿ ಹಾಸನ-ಪಿರಿಯಾಪಟ್ಟಣ ಮಾರ್ಗದ ತಿರುವಿನಲ್ಲಿ ಕೆರೆಗೆ ನುಗ್ಗಿದೆ. ನೀರಿನಲ್ಲಿ ಮುಳುಗಿದ್ದ ಚಾಲಕ ಹಾಗೂ ಮತ್ತೊಬ್ಬ ಈಜಿ ದಡ ಸೇರಿದ್ದಾರೆ. ಅಪಾರ ಬೆಲೆ ಬಾಳುವ ಔಷಧಗಳು ನೀರು ಪಾಲಾಗಿವೆ.