ಜಿಲ್ಲೆ

ಟಾಸ್ಕ್​ ಕಂಪ್ಲೀಟ್​ ನೆಪದಲ್ಲಿ ಬ್ಯಾಂಕ್​ ಉದ್ಯೋಗಿಗೆ ವಂಚನೆ

ಹಾವೇರಿ: ಟೆಲಿಗ್ರಾಮ್​ಗೆ ಪಾರ್ಟ್​ ಟೈಮ್​ ಜಾಬ್​ ಮೂಲಕ ಟಾಸ್ಕ್​ ಕಂಪ್ಲೀಟ್​ ನೆಪದಲ್ಲಿ ಲಿಂಕ್​ ಕಳುಹಿಸಿ ಬ್ಯಾಂಕ್​ ಉದ್ಯೋಗಿಯೊಬ್ಬರಿಗೆ 16.98 ಲಕ್ಷ ರೂ. ವಂಚಿಸಿರುವ ಕುರಿತು ಇಲ್ಲಿಯ ಸೈಬರ್​ ಕೆಂ ಪೊಲೀಸ್​ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ.

ರಾಣೆಬೆನ್ನೂರ ಮಾರುತಿ ನಗರದ ಮಾರುತಿ ಮಂಜುನಾಥ ಲಚ್ಚಣ್ಣನವರ (30) ಎಂಬುವರಿಗೆ ವಂಚನೆ ಮಾಡಿರುವುದು.

ಇವರು ಬ್ಯಾಂಕ್​ವೊಂದರಲ್ಲಿ ಲೈಫ್​ ಇನ್ಯೂರೆನ್ಸ್​ ಸೇಲ್ಸ್​ ಎಕ್ಸಿಕ್ಯೂಟಿವ್​ ಆಗಿ ಕೆಲಸ ಮಾಡುತ್ತಿದ್ದಾರೆ. ಇವರ ಮೊಬೈಲ್​ಗೆ ಅಪರಿಚಿತ ವ್ಯಕ್ತಿ ಟೆಲಿಗ್ರಾಮ್​ಗೆ ಪಾರ್ಟ ಟೈಮ್​ ಜಾಬ್​ ಮೂಲಕ ಟಾಸ್ಕ್​ ಕಂಪ್ಲೆಟ್​ ನೆಪದಲ್ಲಿ ಲಿಂಕ್​ ಕಳುಹಿಸಿದ್ದಾರೆ. ಅದರಲ್ಲಿ 16.98 ಲಕ್ಷ ರೂ. ಹೂಡಿಕೆ ಮಾಡಿಸಿ ಲಾಭದ ಹಾಗೂ ಅಸಲು ಹಣ ಕೊಡದೆ ಮೋಸ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.