ಮಧೂರು: ಹಿಂದು ಧರ್ಮದ ಒಳಗಿನ ವಿವಿಧ ಪಂಥಗಳು ಕೇವಲ ಮಾನವ ನಿರ್ಮಿತ. ವಿಷ್ಣು-ಈಶ್ವರರು ಹಾಲು ತುಪ್ಪವಿದ್ದಂತೆ. ಹಾಲಿನಲ್ಲಿ ತುಪ್ಪದ ಅಂಶ ಅಡಕವಿರುವಂತೆಯೇ ಶಿವನಲ್ಲಿ ವಿಷ್ಣು, ವಿಷ್ಣುವಿನಲ್ಲಿ ಈಶ್ವರ ಐಕ್ಯವಾಗಿದ್ದಾರೆ ಎಂದು ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಹೇಳಿದರು.
ಮಧೂರು ಶ್ರೀಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರದ ಅಷ್ಟಬಂಧ ಬ್ರಹ್ಮಕಲಶ ಹಾಗೂ ಮೂಡಪ್ಪ ಸೇವೆ ಮಂಗಳವಾರದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ವಿಶ್ವ ಹಿಂದು ಪರಿಷತ್ ಕೇರಳ ಮಾತೃಶಕ್ತಿ ಪ್ರಾಂತ್ಯ ಸಂಯೋಜಕಿ ಮಿನಿ ಹರಿಕುಮಾರ್ ಧಾರ್ಮಿಕ ಉಪನ್ಯಾಸ ನೀಡಿದರು. ಬ್ರಿಗೇಡಿಯರ್ ಐ.ಎನ್.ರೈ ಇಚ್ಲಂಪಾಡಿ ಅಧ್ಯಕ್ಷತೆ ವಹಿಸಿದರು. ಹುಡ್ಕೋದ ಮಾಜಿ ಕಾರ್ಯನಿರ್ವಹಣಾಧಿಕಾರಿ ಕೆ.ರವೀಂದ್ರ ಆಳ್ವ ಕೋಟಕುಂಜ, ಮಲಬಾರ್ ದೇವಸ್ವಂ ಬೋರ್ಡ್‌ನ ಪ್ರಾದೇಶಿಕ ಸಮಿತಿ ಅಧ್ಯಕ್ಷ ಕೆ.ವಿ.ಸುರೇಂದ್ರನ್, ಕರ್ನಾಟಕ ಮುಜರಾಯಿ ಇಲಾಖೆಯ ಮಾಜಿ ಸಚಿವ ನಾಗರಾಜ ಶೆಟ್ಟಿ, ಮಧೂರು ಕ್ಷೇತ್ರದ ಪ್ರಧಾನ ಅರ್ಚಕ ಶ್ರೀಕೃಷ್ಣ ಉಪಾಧ್ಯಾಯ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್, ಶಂಕರ್ ಆದೂರು, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್.ಗಟ್ಟಿ, ಎಂ.ಆರ್.ಜಿ. ಹಾಸ್ಪಿಟಾಲಿಟಿ ಮತ್ತು ಇನ್ಫ್ರಾ ಸ್ಟ್ರಕ್ಚರ್‌ನ ಸಿಎಂಡಿ ಡಾ.ಕೆ.ಪ್ರಕಾಶ್ ಶೆಟ್ಟಿ, ಐಲ ಕ್ಷೇತ್ರದ ಆಡಳಿತ ಮೊಕ್ತೇಸರ ನಾರಾಯಣ ಹೆಗಡೆ ಕೊಡಿಬೈಲ್, ಉದ್ಯಮಿ ಸಂತೋಷ್ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು. ಪ್ರಮುಖರಾದ ಕೇಶವ ಆಚಾರ್ಯ ಉಳಿಯತ್ತಡ್ಕ, ಜೋತಿಷಿ ಸಿ.ವಿ.ಪೊದುವಾಳ್, ವಿಶ್ವನಾಥ ಭಟ್, ಯಶೋದಾ ನಾಯ್ಕ, ಎಸ್.ಎನ್.ಮಯ್ಯ, ಡಾ.ಮೃಣಾಲ್ ರಾಘವನ್, ಡಾ.ಸುನಿಲ್ ಚಂದ್ರನ್ ಪಿ.ವಿ. ಉಪಸ್ಥಿತರಿದ್ದರು. ಸುನೀಲ್ ಕುದ್ರೆಪ್ಪಾಡಿ ಸ್ವಾಗತಿಸಿದರು. ರವೀಂದ್ರ ರೈ ವಂದಿಸಿದರು. ಪ್ರಮೀಳಾ ಮಜಲ್ ನಿರೂಪಿಸಿದರು.
ಸಮಸ್ಯೆಗಳು ಬರುವ ಮುನ್ನವೇ ಸಮಸ್ಯೆಗಳ ಮೂಲ ತಿಳಿದು ಎಚ್ಚೆತ್ತುಕೊಂಡು ಮುನ್ನೆಚ್ಚರಿಕೆ ಕ್ರಮ ಕೈಗೊಂಡಲ್ಲಿ ಲವ್ ಜಿಹಾದ್, ಮತಾಂತರದಂತಹ ಪಿಡುಗು ತಡೆಗಟ್ಟಬಹುದು. ಬೆಳೆಯುವ ಮಕ್ಕಳಲ್ಲಿ ಸ್ವಧರ್ಮದ ಕುರಿತಾದ ಪಾಠ ಹೇಳಿಕೊಟ್ಟು ಅದನ್ನು ಮನೆಗಳಲ್ಲಿ ಪಾಲನೆ ಮಾಡಬೇಕು. ಮಿನಿ ಹರಿಕುಮಾರ್ ವಿಶ್ವ ಹಿಂದು ಪರಿಷತ್ ಕೇರಳ ಮಾತೃಶಕ್ತಿ ಪ್ರಾಂತ್ಯ ಸಂಯೋಜಕಿ