ಜಿಲ್ಲೆ

ತಾರಿಹಾಳ ಪಾಲಿಟೆಕ್ನಿಕ್ ಸಾಧನೆ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ತಾರಿಹಾಳ ಸರ್ಕಾರಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ.

ಬೆಳಗಾವಿಯ ನಿಡಸೋಸಿಯ ಹೀರಾ ಶುಗರ್ ಇನ್ ಸ್ಟಿಟ್ಯೂಟ್ ಮತ್ತು ಟೆಕ್ನಾಲಜಿಯಲ್ಲಿ ಟೆಕ್ನೋವಿಜನ್ 2025 ಐಎಸ್ ಟಿಇ ಚಾಪ್ಟರ್ ವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ ರಾಜ್ಯ ಮಟ್ಟದ ತಾಂತ್ರಿಕ ಕೌಶಲ ಸ್ಪರ್ಧೆಯಲ್ಲಿ ಇವರ ಮಾದರಿಯು  ಗಮನ ಸೆಳೆದಿದೆ.

ಪಾಲಿಟೆಕ್ನಿಕ್ ನ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ವಿಭಾಗದ ವಿದ್ಯಾರ್ಥಿಗಳು ತಯಾರಿಸಿದ ಡಿಫೆನ್ಸ್ ರೋಬಾಟ್ ಮಾದರಿಯು ರಾಜ್ಯಕ್ಕೆ ಮೂರನೇ ಬಹುಮಾನ ಪಡೆದಿದೆ. ಉಪನ್ಯಾಸಕ ಟಿ.ಕೆ. ಮಧು ಮಾರ್ಗದರ್ಶನ ನೀಡಿದ್ದರು.