ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಟಾರ್ಗೆಟ್-40 ಪುಸ್ತಕವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ.ನಾರಾಯಣ್ ಬಿಡುಗಡೆ ಮಾಡಿದರು.  
ಜಿಲ್ಲೆ

ಟಾರ್ಗೆಟ್-40 ಪುಸ್ತಕ ಬಿಡುಗಡೆ

ಬೇಲೂರು: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ವಿನೂತನವಾಗಿ ಹೊರತಂದಿರುವ ಟಾರ್ಗೆಟ್-40 ಎಂಬ ಪುಸ್ತಕವನ್ನು ತಾಲೂಕಿನ ಗಬ್ಬಲಗೋಡು ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ.ನಾರಾಯಣ್ ಬಿಡುಗಡೆ ಮಾಡಿದರು.

ತಾಲೂಕಿನ ಎಸ್ಸೆಸ್ಸೆಲ್ಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲೆಂದು ಟಾರ್ಗೆಟ್-40 ಎಂಬ ಪುಸ್ತಕವನ್ನು ಮಕ್ಕಳಿಗೆ ನೀಡುತ್ತಿದ್ದೇವೆ. ಇದು ಮಕ್ಕಳನ್ನು ಉತ್ತಮ ಬದುಕಿನೆಡೆಗೆ ಕೊಂಡೊಯ್ಯಲು ಹಾಗೂ ಶಿಕ್ಷಣವನ್ನು ಸುಲಭವಾಗಿ ಅರ್ಥೈಸಿಕೊಂಡು ಮಕ್ಕಳ ಜ್ಞಾನಾರ್ಜನೆಗೆ ಪೂರಕವಾಗಿ ಮತ್ತು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಲು ಈ ಪುಸ್ತಕ ತುಂಬ ಸಹಕಾರಿಯಾಗಲಿದೆ. ಆದ್ದರಿಂದ ಶಾಲೆಗಳ ಮುಖ್ಯಶಿಕ್ಷಕರು, ಶಿಕ್ಷಕರು ಹಾಗೂ ಪಾಲಕರು ಮಕ್ಕಳ ಜತೆ ಹೆಚ್ಚಿನ ಸಮಯ ಬೆರೆತು ಕೆಲಸ ಮಾಡಬೇಕಿದೆ. ಅಲ್ಲದೆ ಸಾರ್ಥಕ ಹಾದಿಗೆ ಕೊಂಡೊಯ್ಯಲು ಇದು ಸಹಕಾರಿಯಾಗಲಿದ್ದು, ಇದರಲ್ಲಿ ಎಲ್ಲ ಶಿಕ್ಷಕರ ಪಾತ್ರ ಅತಿ ಮುಖ್ಯವಾಗಿದೆ ಎಂದರು.

ಬಿಆರ್‌ಸಿ ಶಿವಮರಿಯಪ್ಪ, ಗಬ್ಬಲಗೋಡು ಪ್ರೌಢಶಾಲೆ ಮುಖ್ಯಶಿಕ್ಷಕ ಎಚ್.ಪಿ.ಗಿರೀಶ, ಶಿಕ್ಷಕರಾದ ನಟರಾಜ್, ಜಾಹ್ನವಿ, ಯೋಗಾನಂದ್, ಸತೀಶ್, ಗೀತಾ, ಶಾಂತಿ ಪಿಂಟೋ, ನವೀನ ಫಿರ್ದೋಸ್ ಹಾಗೂ ವಿದ್ಯಾರ್ಥಿಗಳಿದ್ದರು.