ವಿಟ್ಲ: ಕೃಷಿ ಇಲಾಖೆ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವತಿಯಿಂದ ೨೦೨೫-೨೬ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಹೊರಾಂಗಣ ತರಬೇತಿ ವೀರಕಂಬದಲ್ಲಿ ಮಂಗಳವಾರ ನಡೆಯಿತು.
ಪ್ರಗತಿಪರ ಕೃಷಿಕ ಸಿಮ್ಲಾಜೆ ಗುತ್ತು ಪ್ರಪುಲ್ಲ ಪ್ರಕಾಶ್ ರೈ ಕಾರ್ಯಕ್ರಮ ಉದ್ಘಾಟಿಸಿದರು. ವೀರಕಂಬ ಗ್ರಾಪಂ ಉಪಾಧ್ಯಕ್ಷ ಜನಾರ್ದನ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ವೀರಕಂಬ ಗ್ರಾಮದ ಸಿಆರ್‌ಪಿ ಪುಷ್ಪಾವತಿ, ನಮಿತಾ ಅವರು ಜೀವಾಮೃತ ಹಾಗೂ ಅಗ್ನಿ ಅಸ್ತ್ರದ ಪ್ರಾತ್ಯಕ್ಷಿಕೆ ನೀಡಿದರು. ರೈತ ಸಂಪನ್ಮೂಲ ವ್ಯಕ್ತಿ ಮನೋಹರ ಶೆಟ್ಟಿ ಎಡಪದವು ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ದ್ರವ ರೂಪದ ಗೊಬ್ಬರಗಳ ತಯಾರಿಕೆ ಕುರಿತು ಸಮಗ್ರ ಮಾಹಿತಿ ನೀಡಿದರು. ಬೆಳ್ತಂಗಡಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಕೃಷಿ ಅಽಕಾರಿ ಗಣೇಶ್ ಅಡಿಗ ಜಿಲ್ಲಾ ಕೃಷಿ ತರಬೇತಿ ಕೇಂದ್ರ ಹಾಗೂ ರಸಗೊಬ್ಬರ ಪ್ರಯೋಗಾಲಯದ ಕುರಿತು ಮಾಹಿತಿ ನೀಡಿದರು.
ಸಾಂದೀಪನಿ ಪ್ರಗತಿಪರ ಕೃಷಿಕ ವಿಷ್ಣು ಭಟ್ ಸಹಜ ಕೃಷಿ ಅನುಭವ ಹಂಚಿಕೊಂಡರು. ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ರೋಹಿತಾಕ್ಷ ಬಂಗ ಅನಿಸಿಕೆ ಹಂಚಿಕೊಂಡರು. ವೀರಕಂಬ ಹಾಗೂ ಅಳಿಕೆ ಗ್ರಾಮದ ಬಿಆರ್‌ಸಿ ವಿನುತ್ ಇದ್ದರು. ತರಬೇತಿಯಲ್ಲಿ ೬೦ ರೈತರು ಪಾಲ್ಗೊಂಡರು.
ವೀರಕಂಬ ಗ್ರಾಮದ ಸಿಆರ್‌ಪಿ ನಮಿತಾ ಸ್ವಾಗತಿಸಿದರು. ಬಂಟ್ವಾಳ ತಾಲೂಕಿನ ತಾಂತ್ರಿಕ ಕೃಷಿ ಅಧಿಕಾರಿ ನಂದನ್ ಶೆಣೈ ಪ್ರಸ್ತಾವನೆಗೈದರು. ವಿಟ್ಲ ಹೋಬಳಿ ಆತ್ಮ ಯೋಜನೆಯ ವಿರೂಪಾಕ್ಷಿ ಹಡಪದ ವಂದಿಸಿದರು. ಪುಷ್ಪಾವತಿ ಕಾರ್ಯಕ್ರಮ ನಿರ್ವಹಿಸಿದರು.