ಚನ್ನರಾಯಪಟ್ಟಣ: ಟಿಎಪಿಸಿಎಂಎಸ್‌ಗೆ ಭಾನುವಾರ ಜರುಗಿದ ಚುನಾವಣೆಯಲ್ಲಿ ಎಲ್ಲ ಸ್ಥಾನಗಳಲ್ಲಿಯೂ ಜೆಡಿಎಸ್ ಬೆಂಬಲಿತ ನಿರ್ದೇಶಕರು ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಕ್ಷೇತ್ರದ ಶಾಸಕ ಸಿ.ಎನ್.ಬಾಲಕೃಷ್ಣ ಅವರು 14 ನೂತನ ನಿರ್ದೇಶಕರನ್ನು ಅಭಿನಂದಿಸಿದರು.
ಚನ್ನರಾಯಪಟ್ಟಣ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿಯ 14 ನಿರ್ದೇಶಕರ ಸ್ಥಾನದ ಪೈಕಿ ಬಿ-ತರಗತಿಯಡಿ 7 ಸ್ಥಾನಗಳಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಗೆದ್ದ ನೂತನ ನಿರ್ದೇಶಕರು, ಎಸ್‌ಟಿ ಮೀಸಲಾತಿಯಡಿ ಅವಿರೋಧವಾಗಿ ಆಯ್ಕೆಯಾದ ಒಬ್ಬ ನಿರ್ದೇಶಕ ಮತ್ತು ಎ-ತರಗತಿಯಡಿ ಅವಿರೋಧವಾಗಿ ಆಯ್ಕೆಯಾಗಿದ್ದ 6 ನಿರ್ದೇಶಕರನ್ನು ಸಂಘದ ಕಚೇರಿಯಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ ಅಭಿನಂದಿಸಿದರು.
ಈ ವೇಳೆ ಮಾತನಾಡಿದ ಅವರು, ಕಳೆದ ಎರಡು ದಶಕಗಳಿಂದ ಟಿಎಪಿಸಿಎಂಎಸ್‌ನ ಅಧಿಕಾರ ಚುಕ್ಕಾಣಿ ಇಡಿದ ಜೆಡಿಎಸ್ ಪಕ್ಷವು ಸಂಘ ಮತ್ತು ರೈತರ ಹಿತ ಕಾಯುವ ಕೆಲಸ ಮಾಡಿದೆ. ಷೇರುದಾರ ರೈತರು ನಮ್ಮ ಪಕ್ಷದ ಮೇಲೆ ನಂಬಿಕೆಯಿಟ್ಟು ಎಲ್ಲ 14ಸ್ಥಾನಗಳಲ್ಲಿಯೂ ಜೆಡಿಎಸ್ ಬೆಂಬಲಿತರ ಆಯ್ಕೆಗೆ ಸಹಕಾರ ನೀಡಿದ್ದಾರೆ. ಅವರ ನಂಬಿಕೆಯನ್ನು ನಮ್ಮ ನಿರ್ದೇಶಕರು ಉಳಿಸಿಕೊಳ್ಳುವ ಕೆಲಸ ಮಾಡಲಿದ್ದಾರೆ. ಸಾಲದಲ್ಲಿ ಮುಳಗಿದ್ದ ಟಿಎಪಿಸಿಎಂಎಸ್ ಇದೀಗ 60 ಲಕ್ಷ ರೂ.ಗಳ ಠೇವಣಿ ಹೊಂದಿ, 1.5ಕೋಟಿ ರೂ.ಗಳ ದುಡಿಯುವ ಬಂಡವಾಳ ಹೊಂದಿದೆ. ಸಂಘಕ್ಕೆ ಸುಸಜ್ಜಿತತವಾದ ಕಟ್ಟಡ ಹೊಂದುವ ಜತೆಗೆ 2.5 ಕೋಟಿ ರೂ.ಗಳ ಆಸ್ತಿ ಹೊಂದಿ ರೈತರ ಏಳ್ಗೆಗಾಗಿ ಕೆಲಸ ಮಾಡುತ್ತಿದೆ ಎಂದರು.
ಪಟ್ಟಣದ ಮೈಸೂರು ರಸ್ತೆಯಲ್ಲಿನ ಅಂಬೇಡ್ಕರ್ ವೃತ್ತದ ಬಳಿಯಿರುವ ವಾಣಿಜ್ಯ ಸಂಕಿರ್ಣದ ಹಿಂಭಾಗವಿರುವ ಜಾಗದಲ್ಲಿ ಕಲ್ಯಾಣಮಂಟಪ ನಿರ್ಮಿಸಿ ಅರ್ಥಿಕ ಹೊರೆಯಾಗದ ರೀತಿಯಲ್ಲಿ ಕಡಿಮೆ ಬಾಡಿಗೆ ದರದಲ್ಲಿ ಜನತೆಗೆ ಅವಕಾಶ ಮಾಡುವ ಸಂಕಲ್ಪ ಹೊಂದಲಾಗಿದೆ. ಗೊಬ್ಬರ ಮಾರಾಟದಲ್ಲಿ ವಾರ್ಷಿಕ 5 ಕೋಟಿ ರೂ.ಗಳ ವಹಿವಾಟು ನಡೆಸುತ್ತಿದೆ. ಎಲ್ಲ ನಿರ್ದೇಶಕರ ಪರಿಶ್ರಮದ ಫಲವಾಗಿ ಸಂಘ ಸದೃಢವಾಗಿ ಬೆಳೆಯಲು ಕಾರಣವಾಗಿದೆ ಎಂದರು.
ಟಿಎಪಿಸಿಎಂಎಸ್‌ನ ಕಟ್ಟಡದ ಮುಂಭಾಗದ ಆವರಣಕ್ಕೆ ಶೀಘ್ರದಲ್ಲೆ ಅನುದಾನ ಒದಗಿಸಿ ಕಾಂಕ್ರೀಟಿಕರಣ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಟಿಎಪಿಸಿಎಂಎಸ್‌ನ ಅಧ್ಯಕ್ಷ ಹಾಗೂ ಹ್ಯಾಟ್ರಿಕ್ ಗೆಲುವು ಸಾಧಿಸಿದ ಎಂ.ಆರ್.ಅನಿಲ್‌ಕುಮಾರ್ ಮಾತನಾಡಿದರು.
ಈ ವೇಳೆ ಎ-ತರಗತಿಯಡಿ ಅವಿರೋಧವಾಗಿ ಆಯ್ಕೆಯಾದ ನೂತನ ನಿರ್ದೇಶಕರಾದ ಸಿ.ಎನ್.ಪುಟ್ಟಸ್ವಾಮೀಗೌಡ, ಎಂ.ಎನ್.ಬೋರೆಗೌಡ, ಎನ್.ಕೃಷ್ಣೇಗೌಡ, ಎೆಚ್.ಆರ್.ವೆಂಕಟೇಶಮೂರ್ತಿ, ಕೆ.ಎನ್.ನಾಗರಾಜು, ನಾಗರಾಜು, ಹಾಗೂ ಬಿ-ತರಗಯತಿಯಡಿ ವಿಜೇತರಾದ ಎಂ.ಆರ್.ಅನಿಲ್‌ಕುಮಾರ್, ಟಿ.ಎನ್.ನಂಜುಂಡೇಗೌಡ ತರಬೇನಹಳ್ಳಿ, ತಾರಾಮಣಿ ಆನಂದ್, ಮಮತಾ ಜಯಣ್ಣ, ರಮೇಶ್ ಕುಂಬಾರಹಳ್ಳಿ, ಸಿ.ಜಿ.ಜಗದೀಶ್, ರವಿಕುಮಾರ್ ಕುಂಬಾರಹಳ್ಳಿ, ಹಾಗೂ ಅವಿರೋಧವಾಗಿ ಆಯ್ಕೆಯಾದ ಪಿ.ಉಮೇಶ್ ಅವರನ್ನು ಇದೇ ವೇಳೆ ಅಭಿನಂದಿಸಲಾಯಿತು. ಈ ವೇಳೆ ಜೆಡಿಎಸ್ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ನೂತನ ನಿರ್ದೇಶಕರಿಗೆ ಶುಭಕೋರಿದರು.