ಚಿಕ್ಕಬಳ್ಳಾಪುರ: ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಆಡಳಿತ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿರುವುದರ ನಡುವೆ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರ ವಿರುದ್ಧ ಸ್ವಪಕ್ಷೀಯ ಬೆಂಬಲಿತ ಅಭ್ಯರ್ಥಿಯ ಗೆಲುವಿನ ಮೂಲಕ ಕಾಂಗ್ರೆಸ್ ತೃಪ್ತಿಪಟ್ಟುಕೊಂಡಿದೆ.
ಎ ವರ್ಗದಿಂದ ಬಿ.ಸಿ.ನಾಗೇಶ್ 11 ಮತ ಪಡೆದುಕೊಂಡು ಗೆಲುವು ಸಾಧಿಸಿದರೆ, ಸಂಸದ ಡಾ ಕೆ.ಸುಧಾಕರ್ ಅತ್ಯಾಪ್ತ ಹಾಗೂ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮರಳುಕುಂಟೆ ಕೃಷ್ಣಮೂರ್ತಿ ಕೇವಲ 4 ಮತಗಳನ್ನು ಪಡೆದುಕೊಂಡು ಸೋಲು ಕಂಡಿದ್ದಾರೆ.
ಚುನಾವಣೆಯಲ್ಲಿ ಸಂಸದರು ಹಾಗೂ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅಯ್ಯರ್ ಬಣದ ನಡುವೆ ತೀವ್ರ ಪೈಪೋಟಿ ಉಂಟಾಗಿತ್ತು. ಇದರ ನಡುವೆ ಕಮಲ ಮೇಲುಗೈ ಸಾಧಿಸಿದರೂ ಸ್ವಪಕ್ಷೀಯ ಪ್ರಭಾವಿ ಅಭ್ಯರ್ಥಿ ಸೋಲು ಸಂಸದರ ಪಾಳಯಕ್ಕೆ ಮುಖಭಂಗವಾದಂತಾಗಿದೆ.
ಕೈ ಕೊಟ್ಟ ಸ್ವಪಕ್ಷೀಯರು
ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ(ಟಿಎಪಿಸಿಎಂಎಸ್) ಚುನಾವಣೆಯಲ್ಲಿ ಸಂಸದ ಡಾ.ಕೆ.ಸುಧಾಕರ್ ತಂತ್ರಗಾರಿಕೆ ಯಶಸ್ವಿಯಾಗಿದೆ. ಆದರೆ, ಮರಳುಕುಂಟೆ ಕೃಷ್ಣಮೂರ್ತಿ ವಿಚಾರದಲ್ಲಿ ಸ್ವಪಕ್ಷೀಯರೇ ಪೆಟ್ಟು ಕೊಟ್ಟಿದ್ದಾರೆ. ಸಂಘದ ಚುನಾವಣೆಗೆ ಎ ವರ್ಗದ 15 ಮತದಾರರ ಪೈಕಿ (ತಾಲೂಕು ವ್ಯಾಪ್ತಿಯಲ್ಲಿ 15 ವಿಸ್ಸೆಸ್ಸೆನ್ ಸಂಘಗಳಿಂದ ಬಂದ ತಲಾ ಒಬ್ಬರು) 14 ಮತದಾರರು ಬಹುತೇಕ ಬಿಜೆಪಿ ಅಭ್ಯರ್ಥಿಗಳಿಗೆ ಮತ ಚಲಾಯಿಸಿ ಗೆಲ್ಲಿಸಿದ್ದಾರೆ. ಆದರೆ, ಮರಳುಕುಂಟೆ ಕೃಷ್ಣಮೂರ್ತಿಗೆ ಕೇವಲ 4 ಮತಗಳು ಸಿಕ್ಕಿದ್ದು 10 ಮತದಾರರು ಕೈಕೊಟ್ಟಿರುವುದು, ಬಿ.ಸಿ.ನಾಗೇಶ್ ಪರ ಒಲವು ವ್ಯಕ್ತಪಡಿಸಿರುವುದು ಲಿತಾಂಶದಿಂದ ತಿಳಿದು ಬಂದಿದೆ.
ಕೋಚಿಮುಲ್ ರಾಜಕೀಯ
ಟಿಎಪಿಸಿಎಂಎಸ್ ಲಿತಾಂಶ ೋಷಣೆಯು ಕೋಚಿಮುಲ್ ಚುನಾವಣಾ ರಾಜಕೀಯ ವಿಚಾರಗಳ ಚರ್ಚೆಗೆ ಗ್ರಾಸವಾಗಿದೆ. ಹಿಂದೆ ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್‌ಗೆ ಸ್ವಪಕ್ಷೀಯರು ಕೊನೇ ಕ್ಷಣದಲ್ಲಿ ಕೈ ಕೊಟ್ಟು ಸೋಲಿಸಿದ್ದರು. ಇದೇ ಸಂದರ್ಭದಲ್ಲಿ ಮರಳುಕುಂಟೆ ಕೃಷ್ಣಮೂರ್ತಿ ಕೈವಾಡದ ಶಂಕೆಯ ಆಡಿಯೋ ವೈರಲ್ ಆಗಿತ್ತು. ಸಂಸದರ ಮಧ್ಯೆ ಪ್ರವೇಶದಿಂದ ಆಂತರಿಕ ಅಸಮಾಧಾನ, ಭಿನ್ನಮತ ಶಮನಗೊಂಡಿತ್ತು. ಈಗ ಗೆಲುವಿನ ಸಾಧ್ಯತೆ ನಿಚ್ಚಳವಾಗಿದ್ದರೂ ಕೃಷ್ಣಮೂರ್ತಿ ಸೋಲು ಉಣ್ಣುವಂತಾಗಿದೆ. ಇದಕ್ಕೆ ಒಳೇಟು ಕಾರಣ ಎಂದೇ ಸಹೇಳಲಾಗುತ್ತಿದೆ.
ತೀವ್ರ ಪೈಪೋಟಿ ನಡುವೆ ಟಿಎಪಿಸಿಎಂಎಸ್ ನಿರ್ದೇಶಕ ಚುನಾವಣೆಯಲ್ಲಿ ಗೆಲುವು ಸಿಕ್ಕಿರುವುದು ಖುಷಿಯ ವಿಚಾರ. ಸಾಮಾನ್ಯ ಕಾರ್ಯಕರ್ತ ಎದುರಾಳಿಯ ಪ್ರಭಾವಿ ಪದಾಧಿಕಾರಿ ವಿರುದ್ಧ ಗೆಲ್ಲಲು ಕಾಂಗ್ರೆಸ್‌ನ ಎಲ್ಲರ ಸಹಕಾರ ಪ್ರಮುಖ ಕಾರಣ. ಬಿ.ಸಿ.ನಾಗೇಶ್ | ನೂತನ ಟಿಎಪಿಸಿಎಂಎಸ್ ನಿರ್ದೇಶಕ, ಚಿಕ್ಕಬಳ್ಳಾಪುರ
.