ತೀರ್ಥಹಳ್ಳಿ: ಟಿಎಪಿಎಸಿಎಂಎಸ್ ತಾಲೂಕು ಕೃಷಿ ಮತ್ತು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ಚುನಾವಣೆಯಲ್ಲಿ ಕೆ.ನಾಗರಾಜ್ಶೆಟ್ಟಿ ನೇತೃತ್ವದ ಸಹಕಾರ ಭಾರತಿ ತಂಡ ಬಹುಮತ ಪಡೆದು ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಒಟ್ಟು 13 ಸದಸ್ಯ ಬಲದ ಸಂಘದಲ್ಲಿ ಸಹಕಾರ ಭಾರತಿಗೆ 9, ಸಹಕಾರ ವೇದಿಕೆಗೆ 4 ಸ್ಥಾನಗಳು ಲಭಿಸಿವೆ.
ಚುನಾವಣೆ ನಡೆದ 8 ಸ್ಥಾನಗಳಲ್ಲಿ ಸಹಕಾರ ಭಾರತಿ ತಂಡದ ಆರು ಮಂದಿ ಚುನಾಯಿತರಾಗಿದ್ದಾರೆ. ಒಂದು ಸ್ಥಾನಕ್ಕೆ ಅವಿರೋಧ ಆ್ಕಯೆಾಗಿದ್ದು ಉಳಿದ ಎರಡು ಸ್ಥಾನಗಳಲ್ಲಿ ಸಹಕಾರ ವೇದಿಕೆಯ ಇಬ್ಬರು ಸದಸ್ಯರು ಗೆಲುವಿನ ನಗೆ ಬೀರಿದ್ದಾರೆ. ಸಹಕಾರ ಸಂಘಗಳ ಪ್ರಾತಿನಿಧ್ಯದಿಂದ ಎರಡೂ ತಂಡಗಳಿಗೆ ತಲಾ ಎರಡು ಸ್ಥಾನಗಳು ಲಭಿಸಿವೆ. ಚುನಾವಣೆಯಲ್ಲಿ ಚಲಾವಣೆಯಾದ ಮತಗಳು 1610. ತಾಪಂ ಅಧಿಕಾರಿ ರಾಘವೇಂದ್ರ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ವಿಜೇತರು: ಗಿರಿಯಪ್ಪ ಗೌಡ, ಕೆ.ನಾಗರಾಜ್ ಶೆಟ್ಟಿ, ರಾಜ್ಕಮಲ್ (ಸಾಮಾನ್ಯ ಕ್ಷೇತ್ರ), ಎಂ.ವಿ.ಚಂದ್ರಶೇಖರ್ (ಬಿಸಿಎಂಎ), ಸತೀಶ್ (ಬಿಸಿಎಂಬಿ), ಟಿ.ಮೋಹನ್ (ಪರಿಶಿಷ್ಟ ಜಾತಿ), ನಾಗರತ್ನಾ ಮುರುಘರಾಜ್, ರೇವತಿ ಅನಂತಮೂರ್ತಿ (ಮಹಿಳಾ ಮೀಸಲು), ಕಡಿದಾಳು ತಾರಾನಾಥ್, ಆರ್.ಆರ್ ಚಂದ್ರಪ್ಪ, ನಾರಾಯಣರಾವ್ ಹಾಗೂ ರಮೇಶ್ (ಸಹಕಾ ಸಂಘ), ವಿ.ಎಸ್ ಮೋಹನ್ (ನಾಮನಿರ್ದೇಶನ), ಚಂದ್ರಾನಾಯ್್ಕ (ಅವಿರೋಧ ಆಯ್ಕೆ-ಎಸ್ಟಿ