ಹಾವೇರಿ: ನಮ್ಮಲ್ಲಿ ಹಣ ಹೂಡಿಕೆ ಮಾಡಿದರೆ ಒಂದು ಟ್ರೇಡ್‌ಗೆ ಶೇ. 5ರಷ್ಟು ಲಾಭ ಬರುವುದಾಗಿ ನಂಬಿಸಿ ವೈದ್ಯರೊಬ್ಬರಿಗೆ 4.52 ಲಕ್ಷ ರೂ. ವಂಚಿಸಿದ ಕುರಿತು ಇಲ್ಲಿಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ.
ನಗರದ ಜಿಲ್ಲಾ ಆಸ್ಪತ್ರೆಯ ವೈದ್ಯ ಡಾ. ಮಲಕಾಜಯ್ಯ ಮರಿಸ್ವಾಮಿ ಹಿರೇಮಠ (54) ಎಂಬುವರಿಗೆ ಮೋಸ ಮಾಡಿರುವುದು.
ಇವರಿಗೆ ತನುಶ್ರೀ ಎಂಬುವಳು ಕರೆ ಮಾಡಿ ನಮ್ಮ 5 ಪೈಸೆ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಅದರಲ್ಲಿ ಹೂಡಿಕೆ ಮಾಡಿದರೆ, ಪ್ರತಿ ಒಂದು ಟ್ರೇಡ್‌ನಲ್ಲಿ ಶೇ. 5ರಷ್ಟು ಲಾಭಾಂಶ ಬರಲಿದೆ ಎಂದು ನಂಬಿಸಿದ್ದಾಳೆ. ಅದರಂತೆ ವೈದ್ಯ ಮಲಕಾಜಯ್ಯ ತಮ್ಮ ಖಾತೆಯಿಂದ 4.52 ಲಕ್ಷ ರೂ. ಹಾಕಿದ್ದಾರೆ. ನಂತರ ಹಾಕಿದ ಹಣ ಹಾಗೂ ಲಾಭಾಂಶ ನೀಡದೆ ಮೋಸ ಮಾಡಿದ್ದಾಳೆ ಎನ್ನಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.