ಜಿಲ್ಲೆ

ಟ್ಯಾಂಕರ್ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು

ಕಲಬುರಗಿ ನಗರದ ಹೊರವಲಯದ ಕೋಟನೂರ ಬಳಿಯಿರುವ ವಾಜಪೇಯಿ ಬಡಾವಣೆಯ ಬಳಿಯಲ್ಲಿ ಟ್ಯಾಂಕರ್ ಡಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟ  ಘಟನೆ ನಡೆದಿದೆ.

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಕಲಬುರಗಿ ನಗರದ ಹೊರವಲಯದ ಕೋಟನೂರ ಬಳಿಯಿರುವ ವಾಜಪೇಯಿ ಬಡಾವಣೆಯ ಬಳಿಯಲ್ಲಿ ಟ್ಯಾಂಕರ್ ಡಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟ  ಘಟನೆ ನಡೆದಿದೆ.
ಪದ್ಮನಾಭ ಸತೀಶ (೨೫) ಮೃತಪಟ್ಟ ಯುವಕ. ಬಿದ್ದಾಪುರ ಕಾಲನಿಯ ನಿವಾಸಿಯಾಗಿದ್ದ. ಖಾಸಗಿ ಕೆಲಸ ಮಾಡಿಕೊಂಡು ತಾಯಿ ಜತೆಗೆ ಜೀವನ ಸಾಗಿಸುತ್ತಿದ್ದರು.
ಕೆಲಸದ ನಿಮಿತ್ತ  ಸ್ನೇಹಿತರ ಜತೆಗೆ  ಹೋಗಿ ಬರುವಾಗ ವಾಜಪೇಯಿ ಬಡಾವಣೆಯ ಹತ್ತಿರದಲ್ಲಿ ಹೊರಟಾಗ ಜೇವರ್ಗಿ ಕಡೆಯಿಂದ ಬಂದ ಟ್ಯಾಂಕರ್ ಚಾಲಕ ವೇಗವಾಗಿ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದಿದ್ದರಿಂದ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದರು. ಸಂಚಾರ ಠಾಣೆ-೨ರಲ್ಲಿ ಪ್ರಕರಣ ದಾಖಲಾಗಿದೆ.