ಜಿಲ್ಲೆ

ಟ್ಯಾಂಕರ್ ಬಡಿದು ನಿವೃತ್ತ ಶಿಕ್ಷಕ ನಿಧನ

Uttara Kannada - Subash Hegde

ಗೋಕರ್ಣ:ಹಿರೇಗುತ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಮೇಲೆ ಟ್ಯಾಂಕರ್ ಬಡಿದು ಪಾದಾಚಾರಿ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.

ನಿವೃತ್ತ ಶಿಕ್ಷಕ ಹಿರೇಗುತ್ತಿಯ ವಿಠೋಬ ನಾರಾಯಣ ನಾಯಕ(82) ಮೃತರು.

ಟ್ಯಾಂಕರ್ ಬಡಿದು ತೀವ್ರವಾಗಿ ಗಾಯಗೊಂಡಿದ್ದ ಅವರು ಆಸ್ಪತ್ರೆಗೆ ಒಯುತ್ತಿರುವ ವೇಳೆ ಸಾವನ್ನಪ್ಪಿದರು.ಗೋಕರ್ಣ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.