ಜಿಲ್ಲೆ

ಟ್ಯಾಂಕರ್‌ಗಳ ನಡುವೆ ಅಪಘಾತ-ಹೆದ್ದಾರಿ ಸಂಚಾರ ಬಂದ್‌

Uttara Kannada - Subash Hegde

ಕಾರವಾರ:ಎರಡು ಟ್ಯಾಂಕರ್ ಮುಖಾಮುಖಿ ಡಿಕ್ಕಿಯಾಗಿ, ಒಬ್ಬ ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಮುದಗಾ ಘಟ್ಟದಲ್ಲಿ ಶನಿವಾರ ನಡೆದಿದೆ.
ತೆಲಂಗಾಣದಿಂದ ಗೋವಾ ಕಡೆ ತೆರಳುತ್ತಿದ್ದ ಸ್ಪಿರಿಟ್ ತುಂಬಿದ ಟ್ಯಾಂಕರ್ ಹಾಗೂ ಕಾರವಾರದಿಂದ ಅಂಕೊಲಾ ಕಡೆ ತೆರಳುತ್ತಿದ್ದ ಡಾಂಬರ್ ತುಂಬಿದ ಟ್ಯಾಂಕರ್‌ಗಳ ನಡುವೆ ಡಿಕ್ಕಿ ಸಂಭವಿಸಿದ್ದು, ತೆಲಂಗಾಣ ಟ್ಯಾಂಕರ್ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಎರಡೂ ಟ್ಯಾಂಕರ್‌ಗಳ ಎದುರು ಭಾಗ ಜಕಂಗೊಂಡಿದೆ. ಎರಡರಲ್ಲೂ ಉರಿಯಬಹುದಾದ ವಸ್ತುಗಳು ಇದ್ದು, ಭಾರಿ ಅನಾಹುತ ಸ್ವಲ್ಪದರಲ್ಲಿ ತಪ್ಪಿದಂತಾಗಿದೆ.
ಘಟನೆಯಿಂದ ಕೆಲ ಕಾಲ ರಾಷ್ಟ್ರೀ ಹೆದ್ದಾರಿ 66 ರಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿದ್ದು, ಸಂಚಾರ ಸುಗಮಗೊಳಿಸಿದ್ದಾರೆ.