ಕಲಬುರಗಿ ನಗರದಲ್ಲಿ ಇರುವ ದಿ ಆರ್ಟ್ ಇಂಟಿಗ್ರೇಷನ್ ಸೊಸೈಟಿ ಗೆ ಭೇಟಿ ನೀಡಿದ ಕನ್ನಡ ಮತ್ತು ಸಂಸ್ಕೃತ ಸಚಿವ ಶಿವರಾಜ ತಂಗಡಗಿ ಅವರು ಶಾಲೆಯ ವಿದ್ಯಾರ್ಥಿಗಳ ಚಿತ್ರಕಲಾ ಪ್ರದರ್ಶನ- 2023 ಯನ್ನು ಉದ್ಘಾಟಿಸಿದರು. ಬಳಿಕ ಅಡಳಿತ ಮಂಡಳಿಯ ವತಿಯಿಂದ ಸಚಿವರನ್ನು ಗೌರವಿಸಲಾಯಿತು.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಕಲೆ ಶ್ರೇಷ್ಠವಾಗಿದ್ದು, ಪಂಡಿತರಂತೆ ಖ್ಯಾತ ನಾಮರಾಗಬೇಕು, ಕಲಬುರಗಿ ನಾಡಿನ ಕೀರ್ತಿ ಇನ್ನಷ್ಟು ಉತ್ತುಂಗಕ್ಕೆ ತೆಗೆದುಕೊಂಡು ಹೋಗಲು ಕರೆ ನೀಡಿದರು.