ಜಿಲ್ಲೆ

ತಂಪೆರೆದ ಮಳೆರಾಯ

ವಿಜಯವಾಣಿ ಸುದ್ದಿಜಾಲ ಧಾರವಾಡ
ಕೆಲ ದಿನಗಳಿಂದ ಬಿಡುವು ನೀಡಿದ್ದ ಮಳೆರಾಯ ಭಾನುವಾರ ಸಂಜೆ ಧಾರಾಕಾರವಾಗಿ ಸುರಿಯುವ ಮೂಲಕ ತಂಪೆರೆದಿದ್ದಾನೆ.
ಭಾನುವಾರ ಸಂಜೆ 5 ಗಂಟೆ ಹೊತ್ತಿಗೆ ಆರಂಭವಾದ ಮಳೆ ಸುಮಾರು 2 ತಾಸು ಸುರಿದಿದೆ. ಇದರಿಂದ ನಗರದ ಜನ ಸಂಚಾರದಲ್ಲಿ ಅಸ್ತವ್ಯಸ್ಥ ಉಂಟಾಗಿತ್ತು. ಟೋಲ್​ನಾಕಾ, ಎನ್​ಟಿಟಿಎಫ್ ​ಸೇರಿ ಇತರ ಕಡೆಗಳಲ್ಲಿ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದ್ದರಿಂದ ವಾಹನ ಸವಾರರು ಪರದಾಡುವಂತಾಗಿತ್ತು.
ಕೃಷಿ ಮೇಳಕ್ಕೂ ಅಡ್ಡಿ: ಭಾನುವಾರ ರಜೆ ಇರುವ ಕಾರಣಕ್ಕೆ ಮಧ್ಯಾಹ್ನದಿಂದಲೇ ಸಾಕಷ್ಟು ಜನರು ಕೃಷಿ ಮೇಳ ವೀಕ್ಷಣೆಗೆ ಆಗಮಿಸಿದ್ದರು. ಆದರೆ ಸಂಜೆ ಮಳೆಯಾಗುವ ಲಕ್ಷಣ ಕಂಡು ಬಂದಿದ್ದರಿಂದ ಕೆಲವರು ಬೇಗ ಮನೆ ಸೇರಿದರೆ, ಕೆಲವರು ಮಳೆಯಲ್ಲೇ ಕೃಷಿ ಮೇಳ ವೀಕ್ಷಣೆ ನಡೆಸಿದರು. ಸಂಜೆ ಕೃಷಿ ಮೇಳಕ್ಕೆ ಆಗಮಿಸಲು ತಯಾರಾಗಿದ್ದ ಜನರಿಗೆ ಮಳೆ ನಿರಾಸೆ ಉಂಟು ಮಾಡಿತು.