ಜಿಲ್ಲೆ

ತಮನ್ನಾ ಭಾಟಿಯಾ ರಾಯಭಾರಿ ವಜಾಗೊಳ್ಳಲಿ: ರಾಜ್ಯಸರ್ಕಾರಕ್ಕೆ ಕದಂಬ ಸೈನ್ಯ ಆಗ್ರಹ

ಕೆ.ಎನ್.ರಾಘವೇಂದ್ರ

ಮಂಡ್ಯ: ಜಗತ್ ಪ್ರಸಿದ್ಧ ಮೈಸೂರು ಸ್ಯಾಂಡಲ್ ಸೋಪ್‌ಗೆ ಮಹಾರಾಷ್ಟ್ರದ ನಟಿ ತಮನ್ನಾ ಭಾಟಿಯಾ ಅವರನ್ನು ರಾಯಭಾರಿ ಮಾಡಿ ಕನ್ನಡ ಮತ್ತು ಕನ್ನಡಿಗರಿಗೆ ರಾಜ್ಯಸರ್ಕಾರ ಘನಘೋರ ಅವಮಾನ ಮಾಡಿದೆ ಎಂದು ಕದಂಬ ಸೈನ್ಯ ಆಕ್ರೋಶ ವ್ಯಕ್ತಪಡಿಸಿದೆ.

ಕನ್ನಡ ಚಲನಚಿತ್ರ ನಟ, ನಟಿಯರಿಗೆ ಅವಕಾಶ ಕೊಡದೇ ಮಹಾರಾಷ್ಟ್ರದ ನಟಿಗೆ 6.20 ಕೋಟಿ ರೂ ಯಾವ ಕಾರಣಕ್ಕೆ ನೀಡಿದ್ದೀರಿ ಎಂದು ಸ್ಪಷ್ಟಪಡಿಸಬೇಕು. ರಾಜ್ಯ ಸರ್ಕಾರವೇ ಕನ್ನಡಕ್ಕೆ ಪ್ರಾಮುಖ್ಯತೆ ನೀಡದಿದ್ದರೆ ತಮಿಳುನಾಡು, ಕೇರಳದವರು ಪ್ರಾಮುಖ್ಯತೆ ನೀಡಬೇಕೇ?. ಏತಕ್ಕಾಗಿ ಕನ್ನಡ ವಿರೋಧಿ ಧೋರಣೆ ಅನುಸರಿಸುತ್ತಿದ್ದೀರಿ. ಕೂಡಲೇ ಅವರನ್ನು ರಾಯಭಾರಿಯಿಂದ ವಜಾಗೊಳಿಸಬೇಕು. ಕರ್ನಾಟಕ ಬಸ್ ಮೇಲೆ ಯಾವುದೇ ಕಾರಣಕ್ಕೂ ಪರಭಾಷೆಯ ಜಾಹೀರಾತು ಪ್ರಕಟಿಸಬಾರದು. ಜತೆಗೆ ಪರಭಾಷೆಯ ನಟ, ನಟಿಯರಿಗೆ ಜಾಹೀರಾತು ನೀಡಬಾರದು ಎಂದು ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್, ಜಿಲ್ಲಾಧ್ಯಕ್ಷ ಜೋಸ್ೆ, ಸಂಚಾಲಕ ಸಲ್ಮಾನ್ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.