ಯಲಬುರ್ಗಾದ ತಾಪಂ ಸಾಮರ್ಥ್ಯ ಸೌಧದಲ್ಲಿ ಯಲಬುರ್ಗಾ-ಕುಕನೂರು ತಾಪಂ ವ್ಯಾಪ್ತಿಯ ಕೂಸಿನ ಮನೆ ಆರೈಕೆದಾರರ ಮೂರನೇ ಹಂತದ ತರಬೇತಿ ಕಾರ್ಯಕ್ರಮವನ್ನು ತಾಪಂ ಇಒ ಸಂತೋಷ ಪಾಟೀಲ್ ಉದ್ಘಾಟಿಸಿದರು. ಸಹಾಯಕ ನಿರ್ದೇಶಕ ಹನುಮಂತಗೌಡ ಪಾಟೀಲ್, ಶಿಶು ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಜಯಲಕ್ಷ್ಮೀ ಮೆಣಸಿನಕಾಯಿ, ವಲಯ ಮೇಲ್ವಿಚಾರಕಿ ಮಾಧವಿ ವೈಧ್ಯ ಇದ್ದರು.  
ಜಿಲ್ಲೆ

ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ಕೆಲಸ ಮಾಡಿ

ಕುರುವತ್ತಿ ಶ್ರೀಕಾಂತಪ್ಪ

ಯಲಬುರ್ಗಾ: ಕೂಲಿಕಾರರು, ಬಡವರ ಮಕ್ಕಳ ಆರೈಕೆಗಾಗಿ ಕೂಸಿನ ಮನೆ ಅನುಕೂಲ ಕಲ್ಪಿಸಿದೆ ಎಂದು ತಾಪಂ ಇಒ ಸಂತೋಷ ಪಾಟೀಲ್ ಹೇಳಿದರು.

ಪಟ್ಟಣದ ತಾಪಂ ಸಾಮರ್ಥ್ಯ ಸೌಧದಲ್ಲಿ ಯಲಬುರ್ಗಾ-ಕುಕನೂರು ತಾಪಂ ವ್ಯಾಪ್ತಿಯ ಕೂಸಿನ ಮನೆ ಆರೈಕೆದಾರರ ಮೂರನೇ ಹಂತದ ತರಬೇತಿ ಉದ್ಘಾಟಿಸಿ ಮಾತನಾಡಿದರು. ಕೂಸಿನ ಮನೆ ಆರೈಕೆದಾರರು 7 ದಿನ ತರಬೇತಿ ಪಡೆದು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು. ಕೂಸಿನ ಮನೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಬರುವಂತೆ ನೋಡಿಕೊಳ್ಳಬೇಕು ಎಂದರು.

ತಾಪಂ ಸಹಾಯಕ ನಿರ್ದೇಶಕ ಹನುಮಂತಗೌಡ ಪಾಟೀಲ್ ಮಾತನಾಡಿ, ಗ್ರಾಮೀಣ ಪ್ರದೇಶದ ಬಡವರ ಮಕ್ಕಳಿಗೆ ಕೂಸಿನ ಮನೆ ನೆರವಾಗಲಿದೆ ಎಂದು ಹೇಳಿದರು. ತಾಪಂ ಐಇಸಿ ಸಂಯೋಜಕ ಶರಣಪ್ಪ ಹಾಳಕೇರಿ, ಲಕ್ಷ್ಮಣ ಕೆರಳ್ಳಿ ಇತರರಿದ್ದರು.