ಚಂದ್ರಗಿರಿದೇವಿ, ಗಂಗಾಧರ ಸ್ವಾಮೀ 
ಜಿಲ್ಲೆ

ಇಂದಿನಿಂದ ತಮದಡ್ಡಿ ಗಂಗಾಧರೇಶ್ವರ ಜಾತ್ರೆ

Vijayapura - Desk - Gurappa Lokuri

ತೇರದಾಳ: ತಾಲೂಕಿನ ಕೃಷ್ಣಾ ತೀರದ ತಮದಡ್ಡಿ ಗ್ರಾಮದ ಆರಾಧ್ಯ ದೈವ ಚಂದ್ರಗಿರಿದೇವಿ ಮತ್ತು ಚಕ್ರವರ್ತಿ ಗಂಗಾಧರ ಸ್ವಾಮೀಜಿ ಜಾತ್ರಾ ಮಹೋತ್ಸವ ಏ.8ರಿಂದ ಏ.11ರ ವರೆಗೆ ಅದ್ದೂರಿಯಾಗಿ ನಡೆಯಲಿದೆ.
ಏ.8 ರಂದು ಪಲ್ಲಕ್ಕಿ ಉತ್ಸವದೊಂದಿಗೆ ಜಾತ್ರೆಗೆ ಚಾಲನೆಗೊಳ್ಳಲಿದೆ. ಅಂದು ರಾತ್ರಿ 10 ಗಂಟೆಗೆ ನಿಂಗಾಪುರ ಮತ್ತು ಹೊಸೂರಿನ ಗಾಯನ ಸಂಘಗಳಿಂದ ಚೌಡಕಿ ಪದಗಳನ್ನು ಆಯೋಜಿಸಲಾಗಿದೆ. 9 ರಂದು ಯುಗಾದಿ ಪಾಢ್ಯದಂದು ಶ್ರೀಮಠದಲ್ಲಿ ವಿಶೇಷ ಪೂಜೆ, ರಾತ್ರಿ 8 ಗಂಟೆಗೆ ರಥೋತ್ಸವ ನಡೆಯಲಿದೆ. ಹೊಳೆಬಬಲಾದಿ ಓಂಕಾರಯ್ಯ ಆನಂದಯ್ಯ ಹಿರೇಮಠ, ಶ್ರೀಮಠದ ಸೋಮಯ್ಯ ಮಠದ ಸಾನ್ನಿಧ್ಯ ವಹಿಸುವರು. ಶಾಸಕ ಸಿದ್ದು ಸವದಿ, ಜಗದೀಶ ಗುಡಗುಂಟಿಮಠ, ಎಂಎಲ್‌ಸಿ ಉಮಾಶ್ರೀ ಸೇರಿ ಗಣ್ಯರು ಅಧಿಕಾರಿಗಳು ಹಿರಿಯರು ಭಾಗಿಯಾಗಲಿದ್ದಾರೆ. ಏ.10 ರಂದು ಜಂಗಿ ನಿಕಾಲಿ ಕುಸ್ತಿಗಳು ನಡೆಯಲಿವೆ.
ಜಾತ್ರೆ ನಿಮಿತ್ತ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. 4 ಗಾಲಿ ಟ್ರೇಲರ್ ಟ್ರಾೃಕ್ಟರ್ ರಿವರ್ಸ್ ಸ್ಪರ್ಧೆ, ಸಂಗ್ರಾಮ ಕಲ್ಲು ಎತ್ತುವ ಸ್ಪರ್ಧೆ, ಗುಂಡು ಎತ್ತುವ ಸ್ಪರ್ಧೆ, ಚೀಲ ಎತ್ತು ಸ್ಪರ್ಧೆ, ಜೋಡೆತ್ತಿನ ಒಂದು ನಿಮಿಷದ ಬಂಡಿ ಸ್ಪರ್ಧೆಗಳು ಹಾಗೂ ಆರ್ಕೆಸ್ಟ್ರಾ ತಂಡಗಳಿಂದ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ ಎಂದು ಶ್ರೀಮಠದ ಸೋಮಯ್ಯ ಮಠದ ಸ್ವಾಮೀಜಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.