ಜಿಲ್ಲೆ

ತಮ್ಮನ ಸಾವಿನಿಂದ ಮನನೊಂದು ಅಕ್ಕ ಆತ್ಮಹತ್ಯೆ

Haveri - Kariyappa Aralikatti

ರಾಣೆಬೆನ್ನೂರ: ತಮ್ಮನ ಸಾವಿನಿಂದ ಮನನೊಂದ ಅಕ್ಕ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಟನೆ ಇಲ್ಲಿಯ ಮಾರುತಿ ನಗರದಲ್ಲಿ ನಡೆದಿದೆ.

ಜ್ಯೋತಿ ಚೋಳಪ್ಪ ಸುಂಕದವರ (21) ನೇಣಿಗೆ ಶರಣಾದ ಯುವತಿ.

ಇವಳ ತಮ್ಮ ಮಹೇಶ ಕಳೆದ 6 ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದ. ಇದರಿಂದ ಮನನೊಂದ ಅಕ್ಕ ಕೂಡ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಕುರಿತು ಶಹರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.