ಜಿಲ್ಲೆ

ಪುತ್ತೂರು ತಾಲೂಕು ಆಡಳಿತ ಸೌಧದ ತಾಲೂಕು ಕಚೇರಿ ಸಭಾಂಗಣದಲ್ಲಿ ವಿಶ್ವಕರ್ಮ ಜಯಂತಿ

ಪುತ್ತೂರು: ಋಗ್ವೇದ ಪೂರ್ವ ಕಾಲದಲ್ಲೂ ವಿಶ್ವಕರ್ಮರ ಉಲ್ಲೇಖವಿದೆ. ಭಾರತದ ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ಬರುತ್ತಾರೆ ಎಂದರೆ ಅದು ಇಲ್ಲಿರುವ ವಿಶ್ವಕರ್ಮರ ಕೈಚಳಕದ ಪುರಾಣ ಐತಿಹ್ಯ ಸ್ಥಳಗಳ ಸೌಂದರ್ಯದ ಕಾರಣಕ್ಕೆ. ವಿದೇಶೀಯರು ಶಿಲ್ಪಿಗಳು ಭಕ್ತಿಯಿಂದ ಶಿಲ್ಪಗಳನ್ನು ಮಾಡಿ ಪ್ರತಿಷ್ಠೆ ಮಾಡಿ ಆರಾಧನೆಗೆ ಪೂರಕ ಮಾಡುತ್ತಾರೆ. ಸಮಾಜಕ್ಕೆ ಅಲಂಕಾರ ಕೊಟ್ಟ ವಿಶ್ವಕರ್ಮರ ಅಂತರಾಳದ ತುಡಿತ ಸಮಾಜಕ್ಕೆ ಕೊಡುಗೆ ನೀಡುವುದೇ ಆಗಿತ್ತು ಎಂದು ನ್ಯಾಯವಾದಿ ಕೆ.ಎಂ. ಗಂಗಾಧರ ಆಚಾರ್ಯ ಕೊಂಡೆವೂರು ಹೇಳಿದರು.

ಅವರು ಭಾನುವಾರ ಪುತ್ತೂರು ತಾಲೂಕು ಆಡಳಿತ ಸೌಧದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ತಾಲೂಕು ವಿಶ್ವಕರ್ಮ ಸಮಾಜ ಸೇವಾ ಸಂಘಗಳ ಸಹಯೋಗದಲ್ಲಿ ರವಿವಾರ ನಡೆದ ವಿಶ್ವಕರ್ಮ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರಾದ ತಹಶೀಲ್ದಾರ್ ಶಿವಶಂಕರ್ ದೀಪ ಪ್ರಜ್ವಲನೆ ಮಾಡಿದರು. ರಾಜ್ಯ ಸರಕಾರಿ ನೌಕರರ ಸಂಘದ ಪುತ್ತೂರು ಘಟಕದ ಅಧ್ಯಕ್ಷ ಶಿವಾನಂದ ಆಚಾರ್ಯ ಶುಭಹಾರೈಸಿದರು. ದ.ಕ. ಜಿಲ್ಲಾ ವಿಶ್ವಕರ್ಮ ಹಿತರಕ್ಷಣಾ ಸಂಘ ಗೌರವಾದ್ಯಕ್ಷ ನಲ್ಕ ಗೋಪಾಲಕೃಷ್ಣ ಆಚಾರ್ಯ ಉಪಸ್ಥಿತರಿದ್ದರು.

ಪುತ್ತಿಲ ಪರಿವಾರದ ಸಂಸ್ಥಾಪಕ ಅರುಣ್ ಕುಮಾರ್ ಪುತ್ತಿಲ, ನಗರಸಭಾ ಸದಸ್ಯೆ ಇಂದಿರಾ ಪುರುಷೋತ್ತಮ ಆಚಾರ್ಯ, ವಿಶ್ವಕರ್ಮ ಸಮುದಾಯ ಸಂಘಗಳ ಪ್ರಮುಖರು ಹಾಗೂ ಸಮುದಾಯದ ಪ್ರಮುಖರಾದ ಎಸ್. ಎನ್. ಜಗದೀಶ ಆಚಾರ್ಯ, ನಿರಂಜನ ಆಚಾರ್ಯ, ಶ್ರೀಧರ ಆಚಾರ್ಯ, ಪುರುಷೋತ್ತಮ ಆಚಾರ್ಯ, ಎಡನೀರು ಸುಧಾಕರ ಆಚಾರ್ಯ, ವಸಂತ ಆಚಾರ್ಯ ಸಾಲ್ಮರ, ಗೋಪಾಲಕೃಷ್ಣ ಆಚಾರ್ಯ ಬೀರಮಲೆ , ಕೆ. ಲಕ್ಷ್ಮೀನಾರಾಯಣ ಆಚಾರ್ಯ ಬನ್ನೂರು, ಭೋಜರಾಜ ಆಚಾರ್ಯ, ದೇವದಾಸ ಆಚಾರ್ಯ ಹಾರಾಡಿ, ಉಮಾವತಿ ಸುರೇಂದ್ರ ಆಚಾರ್ಯ, ಪಾಂಡುರಂಗ ಆಚಾರ್ಯ, ನವೀನ್ ಕುಮಾರ್ ಆಚಾರ್ಯ, ಎಂ. ಮನಮೋಹನ್ ಆಚಾರ್ಯ ಪರ್ಪುಂಜ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡರು.

ಕಂದಾಯ ಇಲಾಖೆಯ ಚೈತ್ರಾ ಪ್ರಾರ್ಥಿಸಿದರು. ಕಂದಾಯ ಇಲಾಖೆಯ ಡಿ.ಟಿ. ದಯಾನಂದ್ ಕಾರ್ಯಕ್ರಮ ನಿರೂಪಿಸಿದರು.