ಪುತ್ತೂರು: ಪುತ್ತೂರು ತಾಲೂಕು ಕಛೇರಿಯಲ್ಲಿ ಬುಧವಾರ ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ಪ್ರಗತಿ ಪರಿಶೀಲನೆಯ ಸಭೆಗೆ ಬಂಟ್ವಾಳ ಇ ಓ ಯಾಕಾಗಿ ಬಂದಿಲ್ಲ. ನಮಗೆ ಕೆಲಸ ಇಲ್ಲದ್ದಕ್ಕಾಗಿ ಈ ಸಭೆಯನ್ನು ಮಾಡಲಾಗುತ್ತಿದೆಯಾ? ೯ ಗ್ರಾಮದ ಅಧಿಕಾರಿಗಳು ಬಂದು ಹೇಳುವ ವಿಚಾರಕ್ಕೆ ಉತ್ತರ ನೀಡುವವರು ಯಾರು? ಮುಂದಿನ ದಿನ ಹೀಗಾಗಬಾರದು ಎಂಬ ಎಚ್ಚರಿಕೆಯನ್ನು ಶಾಸಕ ಅಶೋಕ್ ಕುಮಾರ್ ರೈ ಖಡಕ್ ಸೂಚನೆ ನೀಡಿದರು. ವಿಟ್ಲ ಭಾಗಕ್ಕೆ ಪ್ರತ್ಯೇಕ ಸಭೆಯನ್ನು ಮುಂದಿನ ದಿನದಲ್ಲಿ ನಡೆಸಲಾಗುವುದು ಎಂದರು.
ಮಾಣಿಲ ಗ್ರಾಮ ಅಭಿವೃದ್ಧಿಯ ವಿಚಾರದಲ್ಲಿ ತೀವ್ರ ಹಿಂದೆ ಉಳಿದುಕೊಂಡಿದೆ. ಅಭಿವೃದ್ಧಿ ಅಧಿಕಾರಿಗಳು ಎಷ್ಟು ಗಂಟೆಗೆ ಕಛೇರಿಗೆ ತೆರಳುತ್ತಾರೆ ಎಂದು ಶಾಸಕರು ಕೇಳಿದಾಗ ಮಂಗಳೂರಿನಿಂದ ಕಛೇರಿಗೆ ಬರಬೇಕು ಹಾಗೂ ಕನ್ಯಾನ ಗ್ರಾಮದ ಹೆಚ್ಚುವರಿ ಜವಾಬ್ದಾರಿಯು ಇದೆ ಎಂದು ಅಧಿಕಾರಿ ಉತ್ತರ ನೀಡಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ನರೇಗಾ ಸಹಾಯಕ ನಿರ್ದೇಶಕ ಶೈಲಜಾ, ತಾಲೂಕು ಯೋಜನಾಧಿಕಾರಿ ಸುಕನ್ಯಾ, ವಸತಿಯೋಜನೆಯ ತಾಲೂಕು ನೋಡಲ್ ಮಹಮ್ಮದ್ ಸಿರಾಜ್, ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಹಾಜರಿದ್ದರು.