ವಿಜಯವಾಣಿ ಸುದ್ದಿಜಾಲ ಹೆಬ್ರಿ ಹೆಬ್ರಿ ತಾಲೂಕು ಕಚೇರಿಯಲ್ಲಿ ವಿದ್ಯುತ್ ಕಡಿತಗೊಂಡಾಗ ಪರ್ಯಾಯ ವ್ಯವಸ್ಥೆ ಇಲ್ಲದೆ ಸಮಸ್ಯೆ ಎದುರಾಗಿತ್ತು. ಇದೀಗ ಹೆಬ್ರಿ ತಹಸೀಲ್ದಾರ್ ಎಸ್.ಎ ಪ್ರಸಾದ್ ಪರ್ಯಾಯ ವ್ಯವಸ್ಥೆ ಕಲ್ಪಿಸಿದ್ದು, ಸಾರ್ವಜನಿಕರ ಸೇವೆಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಂಡಿದ್ದಾರೆ. ಹೆಬ್ರಿ ತಾಲೂಕು ಆಡಳಿತ ಕಚೇರಿಯಲ್ಲಿ ಕರೆಂಟ್ ಹೋದಾಗ ಇನ್ವರ್ಟರ್ ಕೂಡ ಇಲ್ಲದೆ ಯಾವುದೇ ಸೇವೆಗಳನ್ನು ಸಾರ್ವಜನಿಕರಿಗೆ ನೀಡಲಾಗುತ್ತಿರಲಿಲ್ಲ. ಜನರೇಟರ್ ಇದ್ದರೂ ಅದಕ್ಕೆ ಬ್ಯಾಟರಿಗಳಿಲ್ಲದೆ ಚಾಲು ಆಗುತ್ತಿರಲಿಲ್ಲ. ಇದೀಗ ಬ್ಯಾಟರಿಗಳನ್ನು ಅಳವಡಿಸಲಾಗಿದ್ದು, ಜನರೇಟರ್ ಚಾಲ್ತಿಯಲ್ಲಿರುವುದರಿಂದ ಕರೆಂಟ್ ಹೋದಾಗ ಮುಂದಿನ ದಿನಗಳಲ್ಲಿ ಯಾವುದು ಸಮಸ್ಯೆ ಆಗುವುದಿಲ್ಲ. ವಿಎ ಕಚೇರಿ, ಕಂದಾಯ ನಿರೀಕ್ಷಕರ ಕಚೇರಿ, ಅಟಲ್ ಜಿ ಹಾಗೂ ನಾಡಕಚೇರಿಯ ಸೇವೆಯನ್ನು ಸಾರ್ವಜನಿಕರು ಅಡೆತಡೆಗಳಿಲ್ಲದೆ ಪಡೆಯಬಹುದಾಗಿದೆ.
ಹೆಬ್ರಿ ತಾಲೂಕು ಕಚೇರಿಯಲ್ಲಿ ಈ ಸಮಸ್ಯೆಗೆ ಬಗ್ಗೆ ‘ಕರೆಂಟ್ ಹೋದರೆ ಕೆಲಸ ಸ್ಥಗಿತ’ ಎಂಬ ಶೀರ್ಷಿಕೆ ಅಡಿ ವರದಿ ಪ್ರಕಟಿಸಿತ್ತು. ಜಿಲ್ಲಾಧಿಕಾರಿ ಹಾಗೂ ಕುಂದಾಪುರ ಉಪ ವಿಭಾಗಾಧಿಕಾರಿ ಈ ಬಗ್ಗೆ ಸಂಬಂಧಪಟ್ಟವರಿಂದ ವಾಹಿತಿ ಪಡೆದು, ಶ್ರೀದಲ್ಲಿ ಪರ್ಯಾಯ ವ್ಯವಸ್ಥೆ ವಾಡುವಂತೆ ಆದೇಶಿಸಿದ್ದರು.
ಹೆಬ್ರಿ ತಾಲೂಕು ಕಚೇರಿಯಲ್ಲಿ ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ವಿದ್ಯುತ್ ಕಡಿತವಾದಾಗ ಪರ್ಯಾಯ ವ್ಯವಸ್ಥೆಯನ್ನು ವಾಡಲಾಗಿದೆ. ಬ್ಯಾಟರಿ ಅಳವಡಿಕೆ, ಜನರೇಟರ್ ಚಾಲ್ತಿಯಲ್ಲಿರುವಂತೆ ನೋಡಿಕೊಳ್ಳಲಾಗಿದೆ. ಮುಂದೆ ಜನರಿಗೆ ಸೇವೆಯಲ್ಲಿ ಸಮಸ್ಯೆ ಆಗುವುದಿಲ್ಲ. ಎಸ್.ಎ.ಪ್ರಸಾದ್, ಹೆಬ್ರಿ ತಹಸೀಲ್ದಾರ್.