ಗುಳೇದಗುಡ್ಡ ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ಹನಮಂತ ಪತ್ತಾರ ಮಾತನಾಡಿದರು. ಸಮಾಜದ ತಾಲೂಕು ಅಧ್ಯಕ್ಷ ಚಂದ್ರಶೇಖರ ಬಡಿಗೇರ, ಗೌರವಾಧ್ಯಕ್ಷ ಸುಭಾಷ ಬಡಿಗೇರ, ಉಪಾಧ್ಯಕ್ಷ ಮಾನಪ್ಪ ಬಡಿಗೇರ, ಪ್ರಧಾನ ಕಾರ್ಯದರ್ಶಿ ಅಖಂಡೇಶ್ವರ ಎಂ. ಪತ್ತಾರ ಇತರರಿದ್ದರು. 
ಜಿಲ್ಲೆ

12 ರಂದು ತಾಲೂಕುಮಟ್ಟದ ವಿಶ್ವಕರ್ಮ ಸಮಾಜದ ಜಾಗೃತಿ ಸಮಾವೇಶ

ಗುಳೇದಗುಡ್ಡ: ಪಟ್ಟಣದ ಕರನಂದಿ ರಂಗಮಂದಿರದಲ್ಲಿ ಜ. 12 ರಂದು ಬೆಳಗ್ಗೆ 11.30 ಗಂಟೆಗೆ ಭಗವಾನ್ ವಿಶ್ವಕರ್ಮ ಪೂಜಾ ಮಹೋತ್ಸವ-2025, ತಾಲೂಕುಮಟ್ಟದ ವಿಶ್ವಕರ್ಮ ಸಮಾಜದ ಜನಜಾಗೃತಿ ಸಮಾವೇಶ ಹಾಗೂ ಸಮಾಜದ ಸಾಧಕರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ಹನಮಂತ ಪತ್ತಾರ ಹೇಳಿದರು.

ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಖಿಲ ಕರ್ನಾಟಕ ವಿಶ್ವಕರ್ಮ ಸಮಾಜ ಜಿಲ್ಲಾ ಘಟಕ, ತಾಲೂಕು ಅಖಿಲ ಕರ್ನಾಟಕ ವಿಶ್ವಕರ್ಮ ಸಮಾಜ ಸೇವಾ ಸಂಘ ಹಾಗೂ ಶ್ರೀ ಅನ್ನಪೂರ್ಣೇಶ್ವರಿ ಮಹಿಳಾ ಮಂಡಳ, ಶ್ರೀ ವಿಶ್ವಕರ್ಮ ತರುಣ ಸಂಘ ತಾಲೂಕು ಘಟಕದ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂದು ಬೆಳಗ್ಗೆ ಮಳೇರಾಜೇಂದ್ರ ಸ್ವಾಮಿ ಮಠದಿಂದ ಕುಂಭಮೇಳದೊಂದಿಗೆ ವಿಶ್ವಕರ್ಮ ಮೂರ್ತಿ ಮೆರವಣಿಗೆ ನಡೆಯಲಿದೆ. ಸಮಾಜದ ರಾಜ್ಯಾಧ್ಯಕ್ಷೆ ವಸಂತಾ ಮರಳಿ ಆಚಾರ್ಯರು ಚಾಲನೆ ನೀಡುವರು.

ಬಳಿಕ ಪೂಜೆ, ಧಾರ್ಮಿಕ ಹಾಗೂ ತಾಲೂಕುಮಟ್ಟದ ವಿಶ್ವಕರ್ಮ ಸಮಾಜದ ಜಾಗೃತಿ ಸಮಾವೇಶದ ಉದ್ಘಾಟನಾ ಸಮಾರಂಭ ನಡೆಯಲಿದೆ. ಬಾಗಲಕೋಟೆ ಮಳೆರಾಜೇಂದ್ರಸ್ವಾಮಿ ಮಠದ ಮಳಿಯಪ್ಪಯ್ಯಸ್ವಾಮಿ ಮಹಾಪುರುಷರು, ಗದ್ದನಕೇರಿ ಮಠದ ಭಾಸ್ಕರಸ್ವಾಮಿ ಮಹಾಪುರುಷರು, ಮುರನಾಳ ಮಠದ ಜಗನ್ನಾಥಸ್ವಾಮಿ ಮಹಾಪುರುಷರು, ಹೊನಗನಹಳ್ಳಿಯ ಬ್ರಹ್ಮಾನಂದ ಆಶ್ರಮದ ಸಂಗಪ್ಪಜ್ಜ ಶರಣರು ಸಾನ್ನಿಧ್ಯ ವಹಿಸುವರು. ಕಗಲಗೊಂಬದ ಶ್ರೀರಾಮಾಚಾರ್ಯ ವಿಶ್ವಬ್ರಾಹ್ಮಣ ಸಾನ್ನಿಧ್ಯ ವಹಿಸುವರು.

ಶಾಸಕ ಭೀಮಸೇನ ಚಿಮ್ಮನಕಟ್ಟಿ ಜಾಗೃತಿ ಸಮಾವೇಶ ಉದ್ಘಾಟಿಸುವರು. ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ಹನಮಂತ ಪತ್ತಾರ ಅಧ್ಯಕ್ಷತೆ ವಹಿಸುವರು. ವಿ.ಕ. ಸಮಾಜದ ರಾಜ್ಯಾಧ್ಯಕ್ಷ ಶ್ರೀನಿವಾಸ ಮುನವಳ್ಳಿ ವಿಶ್ವಕರ್ಮ ಮೂರ್ತಿಗೆ ಪುಷ್ಪಾರ್ಚನೆ ಮಾಡುವರು.

ಸಂಸದ ಪಿ.ಸಿ. ಗದ್ದಿಗೌಡರ, ಮಾಜಿ ಶಾಸಕರಾದ ಎಂ.ಕೆ. ಪಟ್ಟಣಶೆಟ್ಟಿ, ರಾಜಶೇಖರ ಶೀಲವಂತ, ಪುರಸಭೆ ಅಧ್ಯಕ್ಷೆ ಜ್ಯೋತಿ ಗೋವಿನಕೊಪ್ಪ, ಉಪಾಧ್ಯಕ್ಷ ರಾಜು ಹೆಬ್ಬಳ್ಳಿ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ, ಕಾಂಗ್ರೆಸ್ ಮುಖಂಡ ಹೊಳಬಸು ಶೆಟ್ಟರ, ಮಹಾಂತೇಶ ಮಮದಾಪೂರ, ಮಹೇಶ ಹೊಸಗೌಡರ, ಶಶಿಧರ ದೇಸಾಯಿ, ರಾಜು ದೇಸಾಯಿ, ಸಂಜಯ ಕಾರಕೂನ, ತಹಸೀಲ್ದಾರ್ ಮಂಗಳಾ ಎಂ., ಉಪತಹಸೀಲ್ದಾರ್ ವೀರೇಶ ಬಡಿಗೇರ, ತಾಪಂ ಇಒ ಮಲ್ಲಿಕಾರ್ಜುನ ಬಡಿಗೇರ, ಸಮಾಜದ ಜಿಲ್ಲಾ ಉಪಾಧ್ಯಕ್ಷೆ ರುಕ್ಮಿಣಿ ಬಡಿಗೇರ ಆಗಮಿಸುವರು. ಬಳಿಕ ಸಮಾಜದ ಸಾಧಕರು, ದಾನಿಗಳನ್ನು ಸನ್ಮಾನಿಸಲಾಗುವುದೆಂದು ತಿಳಿಸಿದ್ದಾರೆ.

ಸಮಾಜದ ತಾಲೂಕು ಅಧ್ಯಕ್ಷ ಚಂದ್ರಶೇಖರ ಬಡಿಗೇರ, ಗೌರವಾಧ್ಯಕ್ಷ ಸುಭಾಷ ಬಡಿಗೇರ, ಉಪಾಧ್ಯಕ್ಷ ಮಾನಪ್ಪ ಬಡಿಗೇರ, ಪ್ರಧಾನ ಕಾರ್ಯದರ್ಶಿ ಅಖಂಡೇಶ್ವರ ಎಂ. ಪತ್ತಾರ, ನೀಲಪ್ಪ ಬಡಿಗೇರ, ಈರಪ್ಪ ಬಡಿಗೇರ, ಲಚ್ಚಪ್ಪ ಕಂಬಾರ, ಮೌನೇಶ ಬಡಿಗೇರ ಇತರರಿದ್ದರು.