ಕೆರೂರ ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶಿವಾನಂದ ಶೆಲ್ಲಿಕೇರಿ ಮಾತನಾಡಿದರು. ನಿಂಗರಾಜ ಕೊಣ್ಣೂರ, ಮಲ್ಲು ಪೂಜಾರ, ಶಿವು ಹುಚ್ಚಪನ್ನವರ ಇದ್ದರು. 
ಜಿಲ್ಲೆ

ಕೆರೂರದಲ್ಲಿ ಆ.11ಕ್ಕೆ ತಾಲೂಕುಮಟ್ಟದ ಜಾನಪದ ಸಮ್ಮೇಳನ

ಕೆರೂರ: ಪಟ್ಟಣದ ಹೊಸಪೇಟಿ ಬಡಾವಣೆಯ ಬನಶಂಕರಿ ದೇವಿ ಕಲ್ಯಾಣ ಮಂಟಪ ಸಭಾಭವನದಲ್ಲಿ ಆ.11 ರಂದು ಬಾದಾಮಿ ತಾಲೂಕುಮಟ್ಟದ ಜಾನಪದ ಸಮ್ಮೇಳನ ನಡೆಯಲಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಹೇಳಿದರು.

ಪಟ್ಟಣದ ಪರಿವೀಕ್ಷಣಾ ಮಂದಿರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇನಾಂ ಹುಲ್ಲಿಕೇರಿ ಗ್ರಾಮದ ಜಾನಪದ ಕಲಾವಿದ ನಿಂಗಪ್ಪ ಮಲ್ಲಾಡದ ಅವರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ಕಲೆ, ಸಾಹಿತ್ಯ, ಜಾನಪದ ಸೇರಿ ವಿವಿಧ ಬಗೆಯ ಕಲೆಗಳಲ್ಲಿ ಸಾಧನೆಗೈದ ಕಲಾವಿದರನ್ನು ಸನ್ಮಾನಿಸಲಾಗುವುದಲ್ಲದೆ, ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದರು.

ಇಲ್ಲಿನ ಪೊಲೀಸ್ ಠಾಣೆ ಬನ್ನಿಕಟ್ಟಿ ವೃತ್ತದಿಂದ ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆ ನಡೆಯಲಿದೆ ತಾಲೂಕಿನ ಜಾನಪದ ಕಲಾವಿದರಿಂದ ಪೂರ್ಣಕುಂಭ ಮೇಳ, ಆಕರ್ಷಕ ನೃತ್ಯ ಮೇಳಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ ಎಂದು ತಿಳಿಸಿದರು.
ನಿಂಗರಾಜ ಕೊಣ್ಣೂರ, ಮಲ್ಲು ಪೂಜಾರ, ಶಿವು ಹುಚ್ಚಪನ್ನವರ ಇತರರಿದ್ದರು.