ಜಿಲ್ಲೆ

ತಾಲೂಕುಮಟ್ಟದ ದಸರಾ ಕ್ರೀಡಾಕೂಟ

ವಿಜಯವಾಣಿ ಸುದ್ದಿಜಾಲ ಚಿಂತಾಮಣಿ

ನಗರದ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಕ್ರೀಡಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಸೆ.8 ಮತ್ತು 9ರಂದು 2 ದಿನದ ತಾಲೂಕುಮಟ್ಟದ ದಸರಾ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ. ಯುವಕ, ಯುವತಿಯರಿಗೆ ಆಯೋಜಿಸಿರುವ ಕ್ರೀಡಾಕೂಟದಲ್ಲಿ ಭಾಗವಹಿಸಲು ಕಡ್ಡಾಯವಾಗಿ ಆನ್​ಲೈನ್​ ನೋಂದಣಿ ಮಾಡಿಕೊಳ್ಳಬೇಕು. 100, 200, 400, 800, 1500 ಮತ್ತು 10,000 ಮೀಟರ್​ ಓಟ ಜತೆಗೆ 4್ಡ100, 4್ಡ400 ರಿಲೆ, ಎತ್ತರ ಜಿಗಿತ, ತ್ರಿಬಲ್​ ಜಂಪ್​, ಗುಂಡು ಎಸೆತ, ಚಕ್ರ ಎಸೆತ, ಜತೆಗೆ ಗುಂಪು ಆಟಗಳಾದ ವಾಲಿಬಾಲ್​, ಕಬಡ್ಡಿ, ಖೋ ಖೋ, ಫುಟ್​ಬಾಲ್​, ಶೆಟ್ಟಲ್​ ಕಾಕ್​, ಬ್ಯಾಸ್ಕೆಟ್​ ಬಾಲ್​ ಇತರ ಕ್ರೀಡೆ ಆಯೋಜಿಸಲಾಗಿದೆ. ವಿವರಗಳಿಗಾಗಿ ಚಿಂತಾಮಣಿಯ ಕ್ರೀಡಾಂಗಣದ ಸಿಬ್ಬಂದಿ, ತಾಲೂಕು ದೈಹಿಕ ಶಿಕ್ಷಣ ಅಧಿಕಾರಿ ಜಿ.ನರಸಿಂಹಪ್ಪ ಸಂಪರ್ಕಿಸಿ.