ಎಲೆಕ್ಟ್ರಾನಿಕ್​ ಸಿಟಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚೈತಾಲಿಕಾ ಹಾಗೂ ತಾಯಿ ಶಿಲ್ಪಾ ಅವರ ಆರೋಗ್ಯವನ್ನು ಬೆಂಗಳೂರು ದಣ ಶಾಸಕ ಎಂ.ಕೃಷ್ಣಪ್ಪ ವಿಚಾರಿಸಿ ವೈದ್ಯರೊಂದಿಗೆ ಚರ್ಚಿಸಿದರು. 
ಜಿಲ್ಲೆ

ಗಾಯಾಳುಗಳಿಗೆ ತಾಲೂಕು ಆಡಳಿತ ಸ್ಪಂದನೆ

ಬೆಂಗಳೂರು ಗ್ರಾಮಾಂತರ ಡೆಸ್ಕ್

ಆನೇಕಲ್ : ಹುಸ್ಕೂರು ಕುರ್ಜು (ತೇರು) ಅವಡದಲ್ಲಿ ಇಬ್ಬರು ಮೃತಪಟ್ಟು, ಹಲವರು ಗಾಯಗೊಂಡಿದ್ದರೂ ರ್ನಿಲಕ್ಷ$್ಯ ವಹಿಸಿದ್ದ ತಾಲೂಕು ಆಡಳಿತ ಕಡೆಗೂ ಗಾಯಗೊಂಡವರ ಆರೋಗ್ಯ ವಿಚಾರಿಸಿದೆ.

ಹುಸ್ಕೂರು ಮದ್ದೂರಮ್ಮ ಜಾತ್ರೆಗೆ ಆಗಮಿಸುತ್ತಿದ್ದ ರಾಯಸಂದ್ರ ಹಾಗೂ ದೊಡ್ಡ ನಾಗಮಂಗಲ ತೇರುಗಳು ನೆಲಕುರುಳಿದ್ದವು. ರಾಯಸಂದ್ರ ತೇರಿನಡಿ ಸಿಲುಕಿ ಇಬ್ಬರು ಮೃತಪಟ್ಟಿದ್ದಲ್ಲದೆ, ಹತ್ತಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದವು. ಟನೆ ನಡೆದು ಎರಡು ದಿನಗಳಾದರೂ ಆನೇಕಲ್​ ತಾಲೂಕು ಆಡಳಿತ ಗಾಯಗೊಂಡವರ ಯೋಗ ಕ್ಷೇಮ ವಿಚಾರಿಸಲು ಮುಂದಾಗಿರಲಿಲ್ಲ.

"ತೇರು ಬಿದ್ದರೂ ಸ್ಪಂದಿಸದ ತಾಲೂಕು ಆಡಳಿತ, ಜಿದ್ದಿಗೆ ಬಿದ್ದು ಕುರ್ಜು ಕಟ್ಟಿದ್ದರು!' ಶೀರ್ಷಿಕೆಯಡಿ "ವಿಜಯವಾಣಿ'ಯಲ್ಲಿ ಸೋಮವಾರ ಸಮಗ್ರ ವರದಿ ಪ್ರಕಟಗೊಂಡ ಬೆನ್ನಲ್ಲೇ ಎಚ್ಚೆತ್ತ ತಹಸೀಲ್ದಾರ್​ ಶಶಿಧರ್​ ಮಾಡ್ಯಾಳ್​ ಹಾಗೂ ಅಧಿಕಾರಿಗಳ ತಂಡ ಆಸ್ಪತ್ರೆಗೆ ದೌಡಾಯಿಸಿ ಗಾಯಗೊಂಡವರ ಆರೋಗ್ಯ ವಿಚಾರಿಸಿದೆ.

ತಪ್ಪು ಮಾಡಿದವರ ಮೇಲೆ ಕ್ರಮ : ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತೇರು ಆಗಮಿಸುವ ರಸ್ತೆ ಸುರತವಾಗಿದೆಯೇ ಎಂಬ ನಿಟ್ಟಿನಲ್ಲಿ ಹೆಬ್ಬಗೋಡಿ ಪೊಲೀಸರಿಗೆ ಮೊದಲೇ ಪತ್ರ ಬರೆದಿದ್ದು, ಇದರ ಬಳಿಕವೂ ಪೊಲೀಸ್​ ಇಲಾಖೆ ಎಚ್ಚೆತ್ತುಕೊಂಡಿಲ್ಲ. ಜತೆಗೆ ಪೊಲೀಸ್​ ಇಲಾಖೆ ಹಾಗೂ ಸ್ಥಳಿಯರು ಸಭೆ ನಡೆಸಿ 80 ಅಡಿ ಮೇಲೆ ತೇರು ಕಟ್ಟಬಾರದು ಎಂಬ ಸೂಚನೆಯನ್ನು ಕೊಡಲಾಗಿತ್ತು. ಆದರೂ ಅದನ್ನು ಧಿಕ್ಕರಿಸಿ ಗ್ರಾಮಸ್ಥರು ತೇರನ್ನು ಕಟ್ಟಿ ಅನಾಹುತಕ್ಕೆ ಕಾರಣವಾಗಿದೆ. ತಪ್ಪು ಮಾಡಿದವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಆನೇಕಲ್​ ಉಪ ವಿಭಾಗದ ಡಿವೈಎಸ್ಪಿ ಮೋಹನ್​ ಕುಮಾರ್​ ತಿಳಿಸಿದ್ದಾರೆ.

ನೆರವಿಗೆ ಅವಕಾಶ ಇಲ್ಲ : ಪ್ರಕೃತಿ ವಿಕೋಪದಿಂದ ಅವಡ ಸಂಭವಿಸಿಲ್ಲ, ಆದರೂ ಜಿಲ್ಲಾಧಿಕಾರಿಗೆ ಪರಿಹಾರಕ್ಕಾಗಿ ಮನವಿ ಮಾಡಿದ್ದೇನೆ. ಒಂದು ವೇಳೆ ಸರ್ಕಾರ ಹಣ ನೀಡಿದರೆ ಪರಿಹಾರ ಸಿಗುತ್ತದೆ ಎಂದು ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ತಹಸಿಲ್ದಾರ್​ ಶಶಿಧರ್​ ಮಾಡ್ಯಾಳ್​ ಹೇಳಿದರು. ದೇವಾಲಯ ಆಡಳಿತ ಸಮಿತಿ ಅಧ್ಯ ಪಾಪಣ್ಣ ವೈಯಕ್ತಿಕವಾಗಿ ಐವತ್ತು ಸಾವಿರ ನೆರವು ನೀಡುವುದಾಗಿ ಇದೇ ಸಂದರ್ಭದಲ್ಲಿ ಹೇಳಿದರು.

ಗಾಯಾಳು ಆರೋಗ್ಯ ವಿಚಾರಿಸಿದ ಶಾಸಕ ಕೃಷ್ಣಪ್ಪ : ತೀವ್ರ ಗಾಯಗೊಂಡು ಎಲೆಕ್ಟ್ರಾನಿಕ್​ ಸಿಟಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚೈತಾಲಿಕಾ (12) ಹಾಗೂ ತಾಯಿ ಶಿಲ್ಪಾ ಅವರ ಆರೋಗ್ಯವನ್ನು ಬೆಂಗಳೂರು ದಣ ಶಾಸಕ ಎಂ.ಕೃಷ್ಣಪ್ಪ ವಿಚಾರಿಸಿ, ಕುಟುಂಬಸ್ಥರಿಗೆ ಧೈರ್ಯ ತುಂಬಿದರು. ಅಲ್ಲದೆ ಶಾಸಕರು ಗಾಯಾಳುಗಳ ಆರೋಗ್ಯ ಸ್ಥಿತಿ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದುಕೊಂಡರು. ತಲೆಗೆ ಪೆಟ್ಟಾಗಿದ್ದು, ಬಲಗೈ ಸಂಪೂರ್ಣ ನಜ್ಜುಗುಜ್ಜಾಗಿದೆ. ಶ್ರೀದಲ್ಲೆ ಆಪರೇಷನ್​ ಮಾಡಲಾಗುವುದು. ಯಾವುದೇ ಭಯ ಪಡಬೇಕಾಗಿಲ್ಲ ಎಂದು ವೈದ್ಯರು ತಿಳಿಸಿದರು. ತಂದೆ ಆಟೋ ಚಾಲಕನಾಗಿದ್ದು, ಚಿಕಿತ್ಸಾ ವೆಚ್ಚ 2 ಲಕ್ಷ ರೂ. ವ್ಯಯಿಸಲಾಗಿದೆ. ಆಪರೇಷನ್​ ಮಾಡಲು ಇನ್ನೂ 2 ಲ ರೂ. ವೆಚ್ಚ ತಗುಲಬಹುದು ಎಂದು ಅಂದಾಜಿಸಲಾಗಿದೆ ಎಂದು ಕುಟುಂಬಸ್ಥರು ಅಲವತ್ತುಕೊಂಡರು. ನಂತರ ಶಾಸಕರು, ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಆಸ್ಪತ್ರೆಯ ಸಂಪೂರ್ಣ ಚಿಕಿತ್ಸಾ ವೆಚ್ಚ ಭರಿಸುವುದಾಗಿ ತಿಳಿಸಿದರು. ದೇವರ ಜಾತ್ರಾ ಮಹೋತ್ಸವದಲ್ಲಿ ದುರ್ಟನೆ ಜರುಗಿದೆ. ಭಯಪಡುವ ಅಗತ್ಯವಿಲ್ಲ, ತಾಯಿ ಹುಸ್ಕೂರು ಮದ್ದೂರಮ್ಮ ಶ್ರೀದಲ್ಲೆ ಗುಣಮುಖರಾಗುವಂತೆ ಹರಸುತ್ತಾಳೆ ಎಂದರು.

ಆಡಳಿತ ಮಂಡಳಿ ವಿರುದ್ಧ ಪ್ರಕರಣ : ರಾಯಸಂದ್ರ ತೇರು ಬಿದ್ದು ಜ್ಯೋತಿ ಹಾಗೂ ಲೋಹಿತ್​ ಮೃತಪಟ್ಟ ಹಿನ್ನೆಲೆಯಲ್ಲಿ ಹೆಬ್ಬಗೋಡಿ ಪೊಲೀಸ್​ ಠಾಣೆಯಲ್ಲಿ ರಾಯಸಂದ್ರ ದೇಗುಲದ ಆಡಳಿತ ಮಂಡಳಿ ವಿರುದ್ಧ ಪ್ರಕರಣ ದಾಖಲಾಗಿದೆ.