ಜಿಲ್ಲೆ

ಜಿಲ್ಲಾ ಮಟ್ಟಕ್ಕೆ ಟ್ಯಾಲೆಂಟ್ ಪಿಯು ಕಾಲೇಜು ತಂಡ

ಲಲಾಟಾಕ್ಷ ಎಸ್

ಹುಣಸೂರು: ಇತ್ತೀಚೆಗೆ ನಗರದ ಮುನೇಶ್ವರ ಕಾವಲ್ ಮೈದಾನದಲ್ಲಿ ಆಯೋಜಿಸಿದ್ದ 2024-25ನೇ ಸಾಲಿನ ಪಿಯು ವಿಭಾಗದ ಕ್ರೀಡಾಕೂಟದ ವಾಲಿಬಾಲ್ ಪಂದ್ಯದಲ್ಲಿ ನಗರದ ಟ್ಯಾಲೆಂಟ್ ಪಿಯು ಕಾಲೇಜಿನ ತಂಡವು ಸತತ 12ನೇ ಬಾರಿಗೆ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.


ಅಲ್ಲದೆ, ಬಾಲ್ ಬ್ಯಾಡ್ಮಿಂಟನ್‌ನಲ್ಲಿ ಪ್ರಥಮ ಸ್ಥಾನದೊಂದಿಗೆ ಕಾಲೇಜಿನ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ. ಅಥ್ಲೆಟಿಕ್ಸ್‌ನ 100 ಮೀಟರ್ ಓಟದಲ್ಲಿ ಪ್ರಭಾಸ್ 2ನೇ ಸ್ಥಾನ, 200 ಮೀಟರ್ ಓಟದಲ್ಲಿ ಪ್ರಥಮ ಹಾಗೂ 400ಮೀ.ನಲ್ಲಿ ಶ್ರೀನಿವಾಸ್ ದ್ವಿತೀಯ, 4* 100 ನಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.


ಬಾಲಕಿಯರ 200 ಮೀ ಓಟದಲ್ಲಿ ಮಹಾಲಕ್ಷ್ಮೀ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಕ್ರೀಡಾಪಟುಗಳ ಸಾಧನೆಯನ್ನು ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕ ನವೀನ್ ರೈ, ಪ್ರಾಂಶುಪಾಲ ಎಂ.ಟಿ.ಮಂಜುನಾಥ್, ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ಶ್ಲಾಘಿಸಿದ್ದಾರೆ.