ದೇವದುರ್ಗ ತಾಲೂಕು ಗಬ್ಬೂರು ಬೂದಿಬಸವೇಶ್ವರ ಜಾತ್ರೆ ಸಮಾರೋಪ ಸಮಾರಂಭದಲ್ಲಿ ಬೂದಿಬಸವ ಶಿವಾಚಾರ್ಯರು ದೇವಸ್ಥಾನದ ಮೇಲೆ ನಿಂತು ಕೈ ಬೀಸಿ ಕರೆಯುವ ಮೂಲಕ ಮಿಣಿ ಇಲ್ಲದೆ ತೇರಿನ ಮನೆಗೆ ಸೇರಿಸುತ್ತಿರುವುದು. 
ಜಿಲ್ಲೆ

ಮಿಣಿ ಇಲ್ಲದೆ ತೇರಿನ ಮನೆ ಸೇರಿದ ರಥ

ದೇವದುರ್ಗ: ತಾಲೂಕಿನ ಗಬ್ಬೂರು ಶ್ರೀ ಬೂದಿಬಸವೇಶ್ವರ ಜಾತ್ರೋತ್ಸವ ಸಮಾರೋಪ ಸಮಾರಂಭದಲ್ಲಿ ಬುಧವಾರ ಮಿಣಿ ಇಲ್ಲದೆ ತೇರು ರಥದ ಮನೆಗೆ ಹೋಗುವ ದೃಶ್ಯವನ್ನು ಸಾವಿರಾರು ಜನರು ಕಣ್ಣಾರೆ ಕಂಡು ಭಕ್ತಿಭಾವದಲ್ಲಿ ಮಿಂದೆದ್ದರು.

ಪೀಠಾಧಿಪತಿ ಬೂದಿಬಸವ ಶಿವಾಚಾರ್ಯರು ಬಾ ಬಸವ ಎಂದೊಡನೆ ರಥ ತೇರಿನ ಮನೆ ಸೇರಿತು.

ಬೂದಿಬಸವೇಶ್ವರ ಶಿವಾಚಾರ್ಯರು ಮಠದ ಮೇಲೆ ನಿಂತು ಕೈ ಬೀಸಿ ಕರೆದರು ಸಾಕು ತಂತಾನೆ ತೇರು ಮುಂದೆ ಸಾಗುತ್ತದೆ. ಸಂಸ್ಥಾನ ಮಠದ ಪ್ರಥಮ ಶ್ರೀಗಳಿಂದ ಪ್ರಾರಂಭವಾಗಿ ಇಂದಿಗೂ ರಥೋತ್ಸವ ಸಂದರ್ಭದಲ್ಲಿ ಬೂದಿಬಸವೇಶ್ವರ ಶಿವಾಚಾರ್ಯರ ಆಣತಿಯಂತೆ ಕೈ ಬೀಸಿ ಕರೆದರೆ ರಥ ಮುಂದೆ ಚಲಿಸುತ್ತದೆ.

ಈ ದೃಶ್ಯವನ್ನು ನೋಡಲು ಸಾವಿರಾರು ಭಕ್ತರು ಸೇರಿದ್ದು ಮಿಣಿ ಇಲ್ಲದೆ ತೇರು ಒಳಹೋಗುವನ್ನು ನೋಡಿ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ನಂತರ ಸಂಜೆ 7 ಗಂಟೆಗೆ ಕಲಾವಿದರಾದ ಶ್ರೀಹರ್ಷ, ಮಹನ್ಯ ಪಾಟೀಲ್, ಸಲೀಂ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.ಬೂದಿಬಸವ ಶಿವಾಚಾರ್ಯರು, ಶಂಭು ಸೋಮನಾಥ ಶಿವಾಚಾರ್ಯರು, ಸದಾಶಿವಯ್ಯ ತಾತ, ಚನ್ನಬಸವ ಸ್ವಾಮಿ, ಬೂದಯ್ಯ ತಾತ ಇತರರಿದ್ದರು.