ತಾಳಿಕೋಟೆ ಪಟ್ಟಣದ ಎಸ್.ಕೆ.ನಗರ ಬಡಾವಣೆಯಲ್ಲಿಯ ಆಂಜನೇಯ ದೇವಸ್ಥಾನದ ಪಕ್ಕದಲ್ಲಿ ನಾಗದೇವತೆ ಮೂರ್ತಿ ಪ್ರತಿಷ್ಠಾಪನೆ ಕಾರ್ಯ ಜರುಗಿತು. ಸಂತೋಷ ಭಟ್ ಗುರೂಜಿ, ವಾಸುದೇವ ಹೆಬಸೂರ, ರಾಜಶೇಖರ ಹಿರೇಮಠ ಇತರರಿದ್ದರು. 
ಜಿಲ್ಲೆ

ನಾಗದೇವತೆ ಮೂರ್ತಿ ಪ್ರತಿಷ್ಠಾಪನೆ

ತಾಳಿಕೋಟೆ: ಪಟ್ಟಣದ ಎಸ್.ಕೆ.ನಗರ ಬಡಾವಣೆಯ ಆಂಜನೇಯ ದೇವಸ್ಥಾನದಲ್ಲಿ ನಾಗದೇವತೆ ಮೂರ್ತಿ ಪ್ರತಿಷ್ಠಾಪನೆ ಸೋಮವಾರ ಜರುಗಿತು.

ಸಂತೋಷ ಭಟ್ ಗುರೂಜಿ ಹಾಗೂ ರವಿ ಗುರೂಜಿ ಪ್ರತಿಷ್ಠಾಪನೆ ನೆರವೇರಿಸಿದರು.ಪುರಸಭೆ ಸದಸ್ಯರಾದ ವಾಸುದೇವ ಹೆಬಸೂರ, ಹಿರಿಯರಾದ ರಾಜಶೇಖರ ಹಿರೇಮಠ, ಡಿ.ವಿ.ಬಡಿಗೇರ, ಎಚ್.ಎಸ್.ಪಾಟೀಲ, ಎಂ.ಎಚ್.ಚೌದ್ರಿ, ಸಿ.ಲಿಂಗಪ್ಪ, ರಾಜು ಹಿರೇಮಠ ಇತರರಿದ್ದರು.

ಪಟ್ಟಣದ ವಿವಿಧ ನಾಗದೇವತೆಗಳ ಮಹಾ ಮೂರ್ತಿಗಳಿಗೆ ಮಹಿಳೆಯರು ಮೊದಲನೇ ದಿನ ಹಾಲು ಎರೆದು ಸಂಭ್ರಮಿಸಿ ಭಕ್ತಿ ಮೆರೆದರು.

ಪಟ್ಟಣದ ಪುರಾತನ ರಾಜವಾಡೆ, ನಾಗರಕಲ್ಲ ಬಡಾವಣೆ, ಭೀಮನಭಾವಿ, ನಾಗಪ್ಪನ ಕಟ್ಟಿ ಒಳಗೊಂಡಂತೆ ವಿವಿಧೆಡೆ ಮಹಿಳೆಯರು ನಾಗದೇವತೆ ಮೂರ್ತಿಗಳಿಗೆ ಹಾಲು ಎರೆದು ನೈವೇದ್ಯ ಅರ್ಪಿಸಿದರು.