ತಾಳಿಕೋಟೆ ಪಟ್ಟಣದಲ್ಲಿ ಶ್ರೀ ಲಕ್ಷ್ಮೀದೇವಿ ಮಂದಿರದ ಜಾತ್ರೋತ್ಸವ ನಿಮಿತ್ತ ನಡೆದ ಮಹಾ ಪೂಜಾಕಾರ್ಯಕ್ರಮದಲ್ಲಿ ಪಾಲ್ಗೊಂಡ ಭಕ್ತರು.  
ಜಿಲ್ಲೆ

ತಾಳಿಕೋಟೆಯಲ್ಲಿ ಲಕ್ಷ್ಮೀದೇವಿ ಜಾತ್ರೋತ್ಸವ ಸಂಭ್ರಮ

ತಾಳಿಕೋಟೆ: ಪ್ರತಿವರ್ಷ ಗೌರಿಹುಣ್ಣಿಮೆ ದಿನ ಆಚರಿಸುವ ಪಟ್ಟಣದ ದೇವರಹಿಪ್ಪರಗಿ ಮುಖ್ಯರಸ್ತೆಯ ಕೆಇಬಿ ಕಚೇರಿ ಪಕ್ಕದ ಶ್ರೀ ಲಕ್ಷ್ಮೀದೇವಿ ಜಾತ್ರೋತ್ಸವ ಶುಕ್ರವಾರ ಸಂಭ್ರಮದಿಂದ ಜರುಗಿತು.

ಮಹಾಲಕ್ಷ್ಮೀದೇವಿ ಮಹಾಮೂರ್ತಿಗೆ ಮಹಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ ಅಲಂಕಾರ ಪೂಜೆ, ಮಹಾಮಂಗಳಾರತಿ ಜರುಗಿತು.

ಗಣೇಶ ನಗರದ ಮುರುಗೇಂದ್ರ ನಿಲಯದಿಂದ ದೇವಿಯ ಮಂದಿರದವರೆಗೆ ಸುಮಂಗಲೆಯರ ಕುಂಭಮೇಳ ಹೊರಟು ಗಂಗಸ್ಥಳ ಕಾರ್ಯಕ್ರಮ ಮಾಡಲಾಯಿತು.

ನಂತರ ಮಂದಿರಕ್ಕೆ ಕಲಶಾರೋಹಣ ಜರುಗಿತು. ಸುಮಂಗಲೆಯರಿಗೆ ಉಡಿತುಂಬುವ ಕಾರ್ಯಕ್ರಮ ಜರುಗಿತು. ಮಹಾಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.

ವೇ.ಮಲ್ಲಯ್ಯ ಮಠ ಪೂಜೆ ನೆರವೇರಿಸಿದರು. ಶಂಕರಗೌಡ ಪಾಟೀಲ, ಸಂಬಾಜಿ ವಾಡ್ಕರ, ಶ್ರೀಶೈಲ ಬಿರಾದಾರ, ಮಯೂರ ಪಾಟೀಲ, ವಿಶ್ವನಾಥ ಬಿದರಕುಂದಿ, ರಾಘು ಹಜೇರಿ, ಮಲ್ಲಾರಿರಾವ್ ಕುಲಕರ್ಣಿ, ಲಕ್ಷ್ಮಣ ಕುಂಬಾರ, ಶಂಕರ ತಳವಾರ, ಗುರಣ್ಣ ಬಳವಾಟ, ಸಿದ್ದನಗೌಡ ಗದ್ದಿಗೇರಿ, ಅಶೋಕ ಅತನೂರ, ಶೇಖರಗೌಡ ಬಿರಾದಾರ, ಪವಾಡೆಪ್ಪ ಬಸರಕೊಡ, ಮುದಕಪ್ಪ ಕುಂಬಾರ,ನಿಂಗನಗೌಡ ಬಿರಾದಾರ, ಮೀನಾಕ್ಷಿ ಪಾಟೀಲ, ಸಾವಿತ್ರಿಬಾಯಿ ವಾಡ್ಕರ, ಸಿದ್ದಮ್ಮ ಬಿರಾದಾರ, ವಿಜಯಲಕ್ಷ್ಮೀ ಪಾಟೀಲ, ಶಾರದಾ ಕಸಬೆಗೌಡರ, ರೇಣುಕಾ ಪಾಟೀಲ, ಸಂಗಮ್ಮ ಪಾಟೀಲ, ವಿಜಯಲಕ್ಷ್ಮೀ ಹಿರೇಮಠ, ಶ್ವೇತಾ ಯರಗಲ್ಲ ಇತರರಿದ್ದರು.