ಗುಳೇದಗುಡ್ಡದ ರಾಠಿ ಹಾಗೂ ಕಾವಡೆ ಆಂಗ್ಲಮಾಧ್ಯಮ ಶಾಲೆಯಲ್ಲಿ ಟ್ಯಾಲೆಂಟ್ಸ್ ಡೇ ಆಚರಿಸಲಾಯಿತು. 
ಜಿಲ್ಲೆ

ಟ್ಯಾಲೆಂಟ್ಸ್ ಡೇ ವಿದ್ಯಾರ್ಥಿಗಳಿಗೆ ಸಹಕಾರಿ

ದತ್ತಾತ್ರೇಯ ಪಿ ಕುಲಕರ್ಣಿ

ಗುಳೇದಗುಡ್ಡ: ಮಕ್ಕಳಲ್ಲಿ ಹುದುಗಿರುವ ಪ್ರತಿಭೆ ಹೊರಹಾಕಲು ಟ್ಯಾಲೆಂಟ್ಸ್ ಡೇ ಸಹಕಾರಿಯಾಗಿದೆ ಎಂದು ರಾಠಿ ಹಾಗೂ ಕಾವಡೆ ಆಂಗ್ಲ ಮಾಧ್ಯಮ ಶಾಲೆ ಅಧ್ಯಕ್ಷ ಅಶೋಕ ಹೆಗಡೆ ಹೇಳಿದರು.

ಸ್ಥಳೀಯ ರಾಠಿ ಹಾಗೂ ಕಾವಡೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಟ್ಯಾಲೆಂಟ್ಸ್ ಡೇ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಪಠ್ಯದ ಜತೆಗೆ ವಿವಿಧ ಕ್ರಿಯಾಶೀಲ ಕಾರ್ಯ ಚಟುವಟಿಕೆಯಲ್ಲಿ ತೊಡಗಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಪ್ರಾಥಮಿಕ ಶಾಲಾ ವಿಭಾಗದ ಮಕ್ಕಳು ವೀರವನಿತೆ ಕಿತ್ತೂರ ರಾಣಿ ಚನ್ನಮ್ಮ ಹಾಗೂ ವನಕೆ ಓಬವ್ವನ ಏಕಪಾತ್ರಾಭಿನಯ ಸೇರಿ ಜಾನಪದ, ದೇಶಭಕ್ತಿಗೀತೆ ಮತ್ತು ಭರತನಾಟ್ಯ ನೃತ್ಯ ಪ್ರದರ್ಶಿಸಿದರು.

ಸಂಸ್ಥೆ ಸದಸ್ಯರಾದ ವಿಠ್ಠಲಸಾ ಕಾವಡೆ, ಶ್ಯಾಮಸುಂದರ ಮಾಲಪಾಣಿ, ಪುರುಷೋತ್ತಮ ಝಂವರ, ಮುಖ್ಯಶಿಕ್ಷಕ ವಿ.ಬಿ. ಹಳ್ಳೂರ, ಜೆ.ಜೆ. ಲೋಬೋ, ಸುಜಾತಾ ಕರಡಿಗುಡ್ಡ, ಶಿಕ್ಷಕರಾದ ಸಂಗೀತಾ ಪರ್ವತೀಕರ, ಶೋಭಾ ಕಾವಡೆ, ಪೂರ್ಣಿಮಾ ಜವಳಿ, ಸಿ.ಎ. ಪರಗಿ, ಯು.ಕೆ. ಪೂಜಾರ, ಶಿವಕುಮಾರ ಪುರಾಣಿಕಮಠ, ಎಚ್.ಎಂ. ಜಿತೂರಿ, ಎಸ್.ಆರ್. ದೊಡ್ಡಮನಿ ಇತರರಿದ್ದರು.