ಜಿಲ್ಲೆ

ಪ್ರತಿಭಾವಂತರಿಗೆ ಸಾದರ ಸಮಾಜದಿಂದ ಸನ್ಮಾನ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿನ ಉಣಕಲ್ಲ ಟೀಚರ್ಸ್ ಕಾಲನಿಯಲ್ಲಿರುವ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ತರಳಬಾಳು ಕ್ಯಾಂಪಸ್ ನಲ್ಲಿ ಪ್ರಸಕ್ತ ವರ್ಷ ತಾಲೂಕಿನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಪ್ರತಿಭಾವಂತರಿಗೆ ಸಾದರ ಸಮಾಜದ ವತಿಯಿಂದ ಸನ್ಮಾನಿಸಲಾಯಿತು.

ತಾಲೂಕಿನ ವಿವಿಧ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಮಹೇಶ ಬೊಮ್ಮನಗೌಡರ, ಮನೋಜ ಹೊಂಬಳ, ಶ್ರೇಯಾ ಪಾಟೀಲ, ಅನುಪಮಾ ಚಿಗರಿ, ಸಾಯಿ ಸಂಕಲ್ಪ, ಪಾವನ ಚೆನ್ನಗೌಡರ, ಅನಿತಾ ಕಡೆಮನಿ, ಮನ್ಸೂರ್ ನದಾ್, ರೂಹಿನ್ ಬಾನು ನದಾ್, ಅಪೂರ್ವ ಮ್ಯಾದಗೋಪ್ಪ ಇತರರನ್ನು ಸನ್ಮಾನಿಸಲಾಯಿತು.

ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಐ.ಜಿ. ಹಿರೇಗೌಡರ ಕಾಲೇಜಿನ ತಸ್ಲೀಮ್ ನಾನಾಪುರಿ, ಸಾವಿತ್ರಿ ಡಾಟನಾಳ, ಅಶ್ವಿನಿ ಭಜಂತ್ರಿ, ಅರ್ಪಿತಾ ಹಜೇರಿ, ಕೀರ್ತಿ ತೆಗ್ಗಿನಮನಿ, ಶ್ವೇತಾ ಕುಂದರಗಿ ಅವರನ್ನು ಗೌರವಿಸಲಾಯಿತು.

ಸಂಸ್ಥೆಯ ಕೇಂದ್ರ ಸಲಹಾ ಮಂಡಳಿ ಸದಸ್ಯ ರಾಮಣ್ಣ ತಡಹಾಳ, ಕಾಲೇಜಿನ ಅಧ್ಯಕ್ಷ ಶಿವಾನಂದ ಹೆಬಸೂರ, ಪ್ರೌಢಶಾಲೆಯ ಅಧ್ಯಕ್ಷ ಆರ್.ವಿ. ಪಾಟೀಲ, ಶಿವಣ್ಣ ಹಂಗರಕಿ, ಎಸ್.ಎಂ. ಶಿರೂರ, ಮುಖ್ಯೋಪಾಧ್ಯಾಯ ಶಿವಕುಮಾರಗೌಡ ಬಿ.ಜಿ., ಶಿಕ್ಷಕರಾದ ಸ್ವಾಮಿ ಎಂ.ಐ, ಭಾರತಿ ವೀರನಗೌಡ್ರ, ಹನುಮಂತ ಉಪ್ಪಾರ, ಗಣೇಶ ಮಾಂಡೇಕರ, ಬಸವರಾಜ ಕುರ್ತಕೋಟಿ ಪಾಲ್ಗೊಂಡಿದ್ದರು.

ಸುರೇಶ ಗುರಣ್ಣವರ ಕಾರ್ಯಕ್ರಮ ನಿರೂಪಿಸಿದರು. ಬಾಲಚಂದ್ರ ಹಳೇಮನಿ ವಂದಿಸಿದರು.
ಆರ್.ಕೆ. ಕೋಕಾಟೆ ಪ್ರೌಢಶಾಲೆ ಮತ್ತು ಹಿರೇಗೌಡರ ಕಾಲೇಜಿನ ಸ್ಥಳಿಯ ಸಲಹಾ ಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.