ಕಲಬುರಗಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಹೆಚ್ಚೆಚ್ಚು ಅಧ್ಯಯನಶೀಲರಾಗಬೇಕು ಎಂದು ಸರ್ವಜ್ಞ ಸಮೂಹ ಸಂಸ್ಥೆ ಸಂಸ್ಥಾಪಕ ಪ್ರೊ.ಚನ್ನಾರಡ್ಡಿ ಪಾಟೀಲ್ ಕಿವಿಮಾತು ಹೇಳಿದರು.
ನಗರದ ಸರ್ವಜ್ಞ ಚಿಣ್ಣರ ಲೋಕ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ರಾಷ್ಟçಮಟ್ಟದ ಇಂಡಿಯನ್ ಟ್ಯಾಲೆಂಟ್ ಓಲಿಂಪಿಯಾಡ್ ಪರೀಕ್ಷೆ ಮತ್ತು ರಾಷ್ಟç ಮಟ್ಟದ ಸೈನ್ಸ್ ಟ್ಯಾಲೆಂಟ್ ಸರ್ಚ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಶನಿವಾರ ಪ್ರಮಾಣ ಪತ್ರ, ಚಿನ್ನದ ಪದಕ, ಸ್ಕಾಲರ್‌ಶಿಪ್ ವಿತರಿಸಿ ಅವರು ಮಾತನಾಡಿದರು.
ಪಾಲಕರು, ಶಿಕ್ಷಕರು ಮಕ್ಕಳ ಉಜ್ವಲ ಭವಿಷ್ಯ ರೂಪಿಸಲು ಶ್ರಮಿಸಬೇಕು. ಮಕ್ಕಳು ಉತ್ತಮ ನಡೆ-ನುಡಿ, ಗುಣ-ಸ್ವಭಾವ, ಆಚಾರ-ವಿಚಾರ, ಸಂಸ್ಕಾರ-ಸAಸ್ಕೃತಿ, ಶಿಸ್ತು-ಸಂಯಮ ಬೆಳೆಸಿಕೊಂಡು ಉತ್ತಮ ಜೀವನ ತನ್ನದಾಗಿಸಿಕೊಳ್ಳಬೇಕು. ಸಾಮಾನ್ಯ ವ್ಯಕ್ತಿಯೂ ಉನ್ನತ ಸಾಧನೆ ಮೂಲಕ ಅಸಾಮಾನ್ಯ ವ್ಯಕ್ತಿಯಾಗಿ ಹೊರಹೊಮ್ಮುತ್ತಾನೆ. ಮಕ್ಕಳು ಆ ನಿಟ್ಟಿನಲ್ಲಿ ಚಿತ್ತ ಹರಿಸಬೇಕು ಎಂದು ಸಲಹೆ ನೀಡಿದರು.
ರೇಖಾ ಸಜ್ಜನ್ ಇದ್ದರು. ನಾಗಮ್ಮ ನಿರೂಪಣೆ ಮಾಡಿದರು. ಚಂದ್ರಕಲಾ ವಂದಿಸಿದರು. ವಿದ್ಯಾರ್ಥಿನಿ ಶರಣಮ್ಮ ಮತ್ತು ಸಂಗಡಿಗರು ಪ್ರಾರ್ಥಿಸಿದರು.
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ರಾಜ್ಯ ಮಟ್ಟಕ್ಕೆ ಅತ್ಯುತ್ತಮ ರ‍್ಯಾಂಕ್ ಪಡೆದ ೮ನೇ ತರಗತಿಯ ನೀಲಾಂಬಿಕಾ ಚೆನ್ನವೀರಪ್ಪ, ೯ನೇ ತರಗತಿಯ ಸವಿತಾ ಪಂಡಿತ್ ತಲವಾರ್, ಅಕ್ಷತಾ ಭೀಮರಾಯ ಹನ್ನೂರ, ೧೦ನೇ ತರಗತಿಯ ಅರ್ಪಿತ ರಾಜೇಂದ್ರ ಪಟ್ಟಣಕರ್ ಹಾಗೂ ಪೃಥ್ವಿರಾಜ್ ಬಸವರಾಜ ಅವರಿಗೆ ಸ್ಕಾಲರ್‌ಶಿಪ್ ವಿತರಿಸಲಾಯಿತು. ಸಾಕ್ಷಿ ಸತೀಶ ಕಲಶೆಟ್ಟಿ, ಸಪ್ನಾ ಈರರೆಡ್ಡಿ, ಪಲ್ಲವಿ ವಿರೂಪಾಕ್ಷ, ಶರಣಪ್ಪ ವಿಶ್ವನಾಥ, ಆದಿತ್ಯ ರೇವಣಸಿದ್ದಪ್ಪ, ಪ್ರಣೀತ ಪ್ರವೀಣ, ಪ್ರಣವಿ ಪ್ರಶಾಂತ, ಸಾನಿಕಾ ಪ್ರಕಾಶ, ಶ್ರೇಯಾ ಶರಣಪ್ಪ, ಪ್ರಾಚೀತಾ ಪ್ರವೀಣ, ಸ್ನೇಹಲ್ ಗಿರಿರಾಜ, ಸಾಕ್ಷಿ ಸಂತೋಷ, ಜಾಹ್ನವಿ ವಿಜಯಕುಮಾರ, ಸಿದ್ದರಾಮ ಸಂಗನಬಸವ, ಅಭಯ ಉದಯಕುಮಾರ್ ಇತರರಿಗೆ ಪ್ರಮಾಣಪತ್ರ ನೀಡಿ ಪ್ರೋತ್ಸಾಹಿಸಲಾಯಿತು. ಪ್ರಾಚಾರ್ಯ ವಿಜಯ ನಾಲವಾರ, ಸಂಯೋಜಕಿ ಕವಿತಾ ಪಾಟೀಲ್ ಮತ್ತು ಶಿಕ್ಷಕರು ಸಾಧಕ ಮಕ್ಕಳನ್ನು ಅಭಿನಂದಿಸಿದರು.