ಮುದಗಲ್ ಹಳೇಪೆಟೆ ಉರ್ದು ಪ್ರಾಥಮಿಕ ಶಾಲೆಯಲ್ಲಿ ವಲಯ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ಉದ್ಘಾಟಿಸಲಾಯಿತು. ಪುರಸಭೆ ಸದಸ್ಯರಾದ ಅಮೀರ್ ಬೇಗ್ ಉಸ್ತಾದ್, ತಸ್ಲಿಂ ಮುಲ್ಲಾ, ಅಮೀನಾ ಬೇಗಂ, ಪಾಷಾಸಾಬ್ ಜಂಗ್ಲಿ ಕ್ರೀಡಾಜ್ಯೋತಿ ಸ್ವೀಕರಿಸಿದರು. 
ಜಿಲ್ಲೆ

ಪ್ರತಿಭೆ ಹೊರಹಾಕಲು ಕ್ರೀಡಾಕೂಟ ಸಹಕಾರಿ

ಮುದಗಲ್: ಶೈಕ್ಷಣಿಕ ಪ್ರಗತಿ ಜತೆಗೆ ಕ್ರೀಡೆಗಳಿಗೆ ಸ್ಪೂರ್ತಿ ನೀಡುವ ಮೂಲಕ ಸರ್ಕಾರ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರ ನೀಡುತ್ತಿದೆ ಎಂದು ತಾಲೂಕು ದೈಹಿಕ ಪರಿವೀಕ್ಷಣಾಧಿಕಾರಿ ಚನ್ನಬಸವ ಮೇಟಿ ಹೇಳಿದರು.

ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ವಲಯ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ ಮಂಗಳವಾರ ಮಾತನಾಡಿದರು.
16ಕ್ಕೂ ಹೆಚ್ಚು ಶಾಲೆಗಳ ಮಕ್ಕಳು ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದು.

ಶೈಕ್ಷಣಿಕ ಪ್ರಗತಿ ಜತೆಗೆ ಇತರೆ ಚಟುವಟಿಕೆಗೆ ಪ್ರೋತ್ಸಾಹ ನೀಡುವ ಮೂಲಕ ಮಕ್ಕಳನ್ನು ಬಹು ಪ್ರತಿಭವಂತರನ್ನಾಗಿ ಮಾಡಬೇಕು. ಕ್ರೀಡಾ ಮನೋಭಾವನೆಯಿಂದ ಭಾಗಿಯಾಗಿ ಉತ್ತಮ ರೀತಿಯಲ್ಲಿ ಆಟವಾಡಿ, ತೀರ್ಪಗಾರರ ನಿರ್ಣಯಕ್ಕೆ ಬದ್ಧರಾಗಿರಿ. ಪ್ರತಿಭೆ ಹೊರಹಾಕಲು ಕ್ರೀಡಾಕೂಟಗಳು ಸಹಕಾರಿ ಎಂದರು.

ಪುರಸಭೆ ಉಪಾಧ್ಯಕ್ಷ ಅಜ್ಮೀರ್ ಬೆಳ್ಳಿಕಟ್, ಪುರಸಭೆ ಸದಸ್ಯರಾದ ಅಮೀರ್ ಬೇಗ್ ಉಸ್ತಾದ್, ತಸ್ಲಿಂ ಮುಲ್ಲಾ, ಅಮೀನಾ ಬೇಗಂ, ಪಾಷಾಸಾಬ್ ಜಂಗ್ಲಿ, ಶಾಲೆ ಎಸ್.ಡಿ.ಎಂ.ಸಿ ಅಧ್ಯಕ್ಷ ಪೂಲೇಸಾಬ್, ದೈಹಿಕ ಶಿಕ್ಷಕರಾದ ಎಸ್.ಎನ್.ಅಕ್ಕಿ ಪ್ರಮುಖರಾದ ತಮ್ಮಣ್ಣ ಗುತ್ತೇದಾರ, ಶರಣಬಸವ ವ್ಯಾಕರನಾಳ, ಚಂದಾವಲಿ ಸಾಬ್, ಚಾಂದ್ ಹಳೇಪೇಟೆ, ರಾಮಜೀ, ಅಜ್ಮೀರ್ ಇದ್ದರು.