ಕುಂದಾಪುರ ನಗರ ಯೋಜನ ಪ್ರಾಧಿಕಾರ ಅಧ್ಯಕ್ಷರಾಗಿ ಆಯ್ಕೆಯಾದ ವಿನೋದ್ ಕ್ರಾಸ್ಟೊ ಅವರನ್ನು ಸನ್ಮಾನಿಸಲಾಯಿತು. ಕಥೊಲಿಕ್ ಸಭಾ ಸಮಿತಿ ನಿಕಟಪೂರ್ವ ಅಧ್ಯಕ್ಷೆ ಶಾಂತಿ ಪಿರೇರಾ, ಮಾಜಿ ಅಧ್ಯಕ್ಷೆ ಮೇಬಲ್ ಡಿಸೋಜಾ ಉಪಸ್ಥಿತರಿದ್ದರು.  
ಜಿಲ್ಲೆ

ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಇಂದಿರಾ ಎನ್ ಕೆ

ಕುಂದಾಪುರ: ಕುಂದಾಪುರ ವಲಯ ಕೆಥೊಲಿಕ್ ಸಭಾ ಸಮಿತಿ, ಶೆವೊಟ್ ಪ್ರತಿಷ್ಠಾನ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಕುಂದಾಪುರ ಸಂತ ಮೇರಿಸ್ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಸೋಮವಾರ ನಡೆಯಿತು.

ಕುಂದಾಪುರ ವಲಯ ಪ್ರಧಾನ ಧರ್ಮಗುರು ಪಾವ್ಲ್ ರೇಗೊ ಉದ್ಘಾಟಿಸಿದರು. ಕುಂದಾಪುರ ವಲಯ ಕೆಥೊಲಿಕ್ ಸಭಾ ಸಮಿತಿ ಅಧ್ಯಕ್ಷ ವಿಲ್ಸನ್ ಡಿ.ಆಲ್ಮೇಡಾ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ನಗರ ಯೋಜನ ಪ್ರಾಧಿಕಾರ ಅಧ್ಯಕ್ಷರಾಗಿ ಆಯ್ಕೆಯಾದ ವಿನೋದ್ ಕ್ರಾಸ್ಟೊ, ವರ್ಕರ್ಸ್ ಇಂಡಿಯಾ ಫೆಡರೇಶನ್ ಕರ್ನಾಟಕ ಅಧ್ಯಕ್ಷ ಎಲ್ರೊಯ್ ಕಿರಣ್ ಕ್ರಾಸ್ಟೊ, ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯೆ ಜುಡಿತ್ ಮೆಂಡೊನ್ಸಾ ಅವರನ್ನು ಸನ್ಮಾನಿಸಲಾಯಿತು. ಶೆವೊಟ್ ಪ್ರತಿಷ್ಠಾನ ವತಿಯಿಂದ ಅಶಕ್ತರಿಗೆ ಧನಸಹಾಯ, ವಿಕ್ರಮ್ ಸುನೀತಾ ಹೆಸರಿನಲ್ಲಿ ಕೊಡಮಾಡುವ ವಿದ್ಯಾರ್ಥಿವೇತನವನ್ನು ಸಂಸ್ಥೆ ಅಧ್ಯಕ್ಷ ವಿನೋದ್ ಕ್ರಾಸ್ಟೊ ವಿತರಿಸಿದರು. ಪ್ರಸಕ್ತ, ಹಾಲಿ ವಲಯ, ಘಟಕ ಅಧ್ಯಕ್ಷರು, ಕಾರ್ಯದರ್ಶಿ, ಡಾ.ಏಶ್ಲಿ ಅಂತೋನಿ ಡಿಸಿಲ್ವಾ, ಬರ್ನಾಡ್ ಡಿಕೋಸ್ತಾ ಅವರನ್ನು ಗೌರವಿಸಲಾಯಿತು.

ಕೆಥೊಲಿಕ್ ಸಭಾ ಸಮಿತಿ ನಿಕಟಪೂರ್ವ ಅಧ್ಯಕ್ಷೆ ಶಾಂತಿ ಪಿರೇರಾ, ಮಾಜಿ ಅಧ್ಯಕ್ಷೆ ಮೇಬಲ್ ಡಿಸೋಜ ಉಪಸ್ಥಿತರಿದ್ದರು. ಫಿಲೋಮಿನಾ ಡಿಸೋಜ, ಅನಿಲ್ ಡಿಸಿಲ್ವ, ಜೂಲಿಯೆಟ್ ಪಾಯ್ಸ ಸನ್ಮಾನಿತರನ್ನು ಪರಿಚಯಿಸಿದರು. ಖಜಾಂಚಿ ಶೈಲಾ ಡಿ. ಆಲ್ಮೇಡಾ ವಿಜೇತರ ಹೆಸರು ವಾಚಿಸಿದರು. ಪ್ರೇಮಾ ಡಿಕುನ್ನಾ ಕಾರ್ಯಕ್ರಮ ನಿರೂಪಿಸಿದರು. ಕೆಥೊಲಿಕ್ ಸಭಾ ಕಾರ್ಯದರ್ಶಿ ಗ್ರೆವೀನ್ ಪಸನ್ನಾ ವಂದಿಸಿದರು.