ಜಿಲ್ಲೆ

ಕಚ್ಚೂರು ಕ್ಷೇತ್ರದಲ್ಲಿ ಪ್ರತಿಭಾ ಪುರಸ್ಕಾರ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಬ್ರಹ್ಮಾವರ

ಕಚ್ಚೂರು ಧಾರ್ಮಿಕ ಮುಖಂಡ ಗೋಕುಲ್ ದಾಸ್ ಬಾರಕೂರು ಸರ್ಕಾರದ ನಿಗಮ ಮಂಡಳಿಗಳಿಗೆ ಸೂಕ್ತ ಎಂದು ಉಡುಪಿ ಶಾಸಕ ಯಶಪಾಲ್ ಸುವರ್ಣ ಹೇಳಿದರು.

ಬಾರಕೂರು ಕಚ್ಚೂರು ಶ್ರೀ ಮಾಲ್ತಿದೇವಿ ದೇವಸ್ಥಾನ, ಶ್ರೀ ಬಬ್ಬು ಸ್ವಾಮಿ ಮೂಲಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವ ಸಂದರ್ಭ ಆಯೋಜಿಸಲಾಗಿದ್ದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿ ಮಾತನಾಡಿದರು.

ಬಾರಕೂರು ಮಹಾಸಂಸ್ಥಾನದ ವಿದ್ಯಾವಾಚಸ್ಪತಿ ಡಾ.ವಿಶ್ವಸಂತೋಷ ಭಾರತಿ ಶ್ರೀಗಳು ಧಾರ್ಮಿಕ ಪ್ರವಚನ ನೀಡಿದರು. ವಿಧಾನಪರಿಷತ್ ಪ್ರತಿಪಕ್ಷ ನಾಯಕ ಭಲವಾದಿ ನಾರಾಯಣ ಸ್ವಾಮಿ ಅವರನ್ನು ಕ್ಷೇತ್ರದ ವತಿಯಿಂದ ಸನ್ಮಾನಿಸಲಾಯಿತು.

ಮಾಜಿ ಶಾಸಕ ಕೆ.ರಘುಪತಿ ಭಟ್, ಬಾರಕೂರು ಗ್ರಾ.ಪಂ. ಅಧ್ಯಕ್ಷ ಶಾಂತಾರಾಮ ಶೆಟ್ಟಿ, ಲೆಕ್ಕಪರಿಶೋಧಕ ಸಿ.ಎ. ಕೆ.ಪದ್ಮನಾಭ ಕಾಂಚನ್, ಪ್ರಮುಖರಾದ ಸುಗ್ಗಿ ಸುಧಾಕರ ಶೆಟ್ಟಿ, ಶಿವಪ್ಪ ನಂತೂರು, ಪಿ.ಬಾಬು ಮಲ್ಲಾರ್, ಹರಿಶ್ಚಂದ್ರ, ಶಿವರಾಜ್ ಮಲ್ಲಾರ್, ಪ್ರದೀಪ್ ಕಾಪಿಕಾಡ್, ಮಂಜುನಾಥ ಕರ್ಕೇರ, ಮಂಜುನಾಥ ತವರುಮನೆ, ಡಾ.ಅಪ್ಪಗೆರೆ ತಿಮ್ಮರಾಜು, ರಾಜು ಹೆಜಮಾಡಿ, ಗಣೇಶ್ ನೆರ್ಗಿ, ಜಲಜಾಕ್ಷಿ ತಮ್ಮಯ್ಯ, ರವೀಂದ್ರ ಸಾಲ್ಯಾನ್ ಉಪಸ್ಥಿತರಿದ್ದರು. ಗೋಕುಲ್‌ದಾಸ್ ಬಾರಕೂರು ಸ್ವಾಗತಿಸಿದರು. ಪ್ರೇಮಾನಂದ ಬಾರಕೂರು ವಂದಿಸಿದರು.