ಜಿಲ್ಲೆ

ಗಾಣಿಗ ಸಂಘದಿಂದ ಪ್ರತಿಭಾಪುರಸ್ಕಾರ

ವಿಜಯವಾಣಿ ಸದ್ದಿಜಾಲ ಚಿಂತಾಮಣಿ

ತಾಲೂಕು ಗಾಣಿಗರ ಕ್ಷೇಮಾಭಿವೃದ್ಧಿ ಸಂಘದಿಂದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಸಮುದಾಯದ ವಿದ್ಯಾರ್ಥಿಗಳಿಗೆ ಆ.16ರಂದು ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಕುರುಟಹಳ್ಳಿ ಕೃಷ್ಣಮೂರ್ತಿ ತಿಳಿಸಿದರು.

ಸಂಘದದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಶೇ.60, ಖಾಸಗಿ ಶಾಲೆಯ ವಿದ್ಯಾರ್ಥಿಗಳು ಶೇ.80ರಷ್ಟು ಅಂಕ ಗಳಿಸಿರಬೇಕು. ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ನಗರದ ಟ್ಯಾಂಕ್ ಬಂಡ್ ರಸ್ತೆಯಲ್ಲಿರುವ ಶಿಲ್ಪಾ ಶಾಲೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದು, ಅರ್ಜಿ ಸಲ್ಲಿಸಲು ಆ.10 ಕೊನೇ ದಿನ ಎಂದರು.

ಬೆಂಗಳೂರು ಕಾಲ್ತುಳಿತದಲ್ಲಿ ಮೃತಪಟ್ಟ ಮೊಮ್ಮಗ ಶ್ರವಣ ಸ್ಮರಣಾರ್ಥ ತಾ.ಪಂ. ಮಾಜಿ ಸದಸ್ಯ ಕುರುಟಹಳ್ಳಿ ಕೃಷ್ಣಪ್ಪ ಅವರು ಸಂಘಕ್ಕೆ 25 ಸಾವಿರ ರೂ. ಚೆಕ್ ದೇಣಿಗೆ ನೀಡಿದರು.

ತಾಲೂಕು ಗಾಣಿಗರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಕೆ.ಎನ್.ನರಸಿಂಹಪ್ಪ, ಖಜಾಂಚಿ ಆಂಜಪ್ಪ, ಸದಸ್ಯರಾದ ಸಿ.ವಿ.ರಾಮು, ಬರ್ಕಲಿ ರವಿ, ಸುಬ್ರಮಣಿ, ನಟರಾಜ್, ಪ್ರಸಾದ್, ವೆಂಕಟೇಶ್, ರಮೇಶ್, ಚಂದ್ರ, ಕೆಎಸ್‌ಆರ್‌ಟಿಸಿ ಕೃಷ್ಣ, ಶ್ರೀನಿವಾಸ್ ಇದ್ದರು.