raichur 
ಜಿಲ್ಲೆ

ಮಡಿವಾಳ ಸಮಾಜದಿಂದ ಪ್ರತಿಭಾ ಪುರಸ್ಕಾರ * ವಿದ್ಯಾರ್ಥಿಗಳ ಸಾಧನೆ ಅಭೂತಪೂರ್ವ ಸಾಧನೆ- ಸಂಸದ

 ರಾಯಚೂರು ಮಡಿವಾಳ ಸಮಾಜ ಕೇಲವ ಕಾಯಕದಲ್ಲಿ ಮಾತ್ರವಲ್ಲದೇ ಶೈಕ್ಷಣಿಕವಾಗಿ ಸಾಧನೆ ಮಾಡಿದೆ. ಸಮಾಜದ ವಿದ್ಯಾರ್ಥಿಗಳು ಶೇ.90ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದಿದ್ದು, ಈ ಸಾಧನೆಯನ್ನು ನವಮಾನ ಅಂಕಿಗಳ ಸಾಧನೆ ಎನ್ನಬಹುದಾಗಿದೆ ಎಂದು ಸಂಸದ ಜಿ.ಕುಮಾರ ನಾಯಕ ಹೇಳಿದರು.

ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಭಾನುವಾರ ಮಡಿವಾಳ ಸಮಾಜದಿಂದ ಹಮ್ಮಿಕೊಂಡಿದ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಸಾಧಕರಿಗೆ ಗೌರವ ಸನ್ಮಾನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ವಿದ್ಯಾರ್ಥಿಗಳ ಸಾಧನೆ ಅಭೂತಪೂರ್ವ ಸಾಧನೆಯಾಗಿದ್ದು, ಮನಸ್ಸಿಗೆ ಮುಧ ನೀಡುವಂತ ದ್ದಾಗಿದೆ. ಅನೇಕ ಸವಾಲುಗಳು, ಸಮಸ್ಯೆಗಳ ಮಧ್ಯೆಯೂ ಸಮಾಜದ ವಿದ್ಯಾರ್ಥೀಗಳು ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡಿರುವುದು ಸಂತಸದ ವಿಚಾರವಾಗಿದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳು ಜೀವನದಲ್ಲಿ ಇನ್ನೂ ಸಾಧನೆ ಮಾಡುವುದು ಸಾಕಷ್ಟಿದ್ದು, ಸಾಧನೆಯ ಗುರಿಯ ಕಡೆಗೆ ಮಾತ್ರ ಗಮನಹರಿಸಿ ಉತ್ತಮ ಪ್ರಜೆಗಲಾಗಬೇಕು ಎಂದು ಕರೆ ನೀಡಿದರು. ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಮಾತನಾಡಿ, ಜನರ ಅನುಕೂಲಕ್ಕಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು, ಜನರ ಸಹಕಾರದಿಂದ ಮಾತ್ರ ಈ ಎಲ್ಲಾ ಯೋಜನೆಗಳನ್ನು ಅನುಷ್ಟಾನಗೊಳಿಸಲು ಸಾಧ್ಯವಾಗುತ್ತದೆ. ರಾಜ್ಯದ ಶೈಕ್ಷಣಿಕ ಫಲಿತಾಂಶದಲ್ಲಿ ಜಿಲ್ಲೆಯೂ ಕೊನೆಯ ಸ್ಥಾನದಲ್ಲಿದ್ದು, ಇಲ್ಲಿನ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಪಾಲಕರಿಂದ ಮಕ್ಕಳಲ್ಲಿ ಶೈಕ್ಷಣಿಕ ಗುಣಗಳನ್ನು ಬೆಳೆಸಿ ಉತ್ತಮ ಶಿಕ್ಷಣವಂತರನ್ನಾಗಿ ಮಾಡುವ ಜವಾಬ್ದಾರಿಯಿದೆ ಎಂದರು.


ಸಾನಿಧ್ಯವನ್ನು ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ಸೋಮವಾರಪೇಟೆ ಮಠದ ಅಭಿನವ ರಾಚೋಟಿವೀರ ಶಿವಾಚಾರ್ಯಸ್ವಾಮೀಜಿ ವಹಿಸಿದ್ದರು.
ಈ ಸಂದರ್ಭದಲ್ಲಿ ನಗರ ಶಾಸಕ ಡಾ.ಶಿವರಾಜ್ ಪಾಟೀಲ್,ಮಹಾನಗರ ಪಾಲಿಕೆ ಅಧ್ಯಕ್ಷೆ ನರಸಮ್ಮ ನರಸಿಂಹಲು ಮಾಡಗಿರಿ, ಪ್ರಮುಖರಾದ ಎನ್.ಶಂಕ್ರಪ್ಪ, ಜಿ.ಶಿವಮೂರ್ತಿ, ಕೆ.ಶಾಂತಪ್ಪ, ಜಯಣ್ಣ, ಪವನ್‌ಕುಮಾರ, ರವೀಂದ್ರ ಜಲ್ದಾರ್, ಶೇಖರಪ್ಪ, ಮಲ್ಲೇಶ, ಸೂಗಪ್ಪ, ವಿರುಪಾಕ್ಷಪ್ಪ, ವೆಂಕಟೇಶ, ಆಂಜಿನೇಯ್ಯ, ಚಂದ್ರಶೇಖರ, ಮಂಜುಳಾ, ಹನುಮಂತಪ್ಪ, ಹನುಮಂತ ಸೇರಿ ಅನೇಕರು ಇದ್ದರು.