ಜಿಲ್ಲೆ

ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ತಾಲೂಕಿನ ವೀರಶೈವ ಲಿಂಗಾಯತ ಎಲ್ಲ ಒಳಪಂಗಡಗಳ ಸಮಾಜದ ಎಸ್​ಎಸ್​ಎಲ್​ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ. 95 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಜುಲೈ 20ರಂದು ನಗರದ ಸವಾಯಿ ಗಂಧರ್ವ ಹಾಲ್​ನಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ ಏರ್ಪಡಿಸುವ ಕುರಿತು ಮಂಗಳವಾರದಂದು ಪೂವಭಾವಿ ಸಭೆ ನಡೆಯಿತು.

ಪುರಸ್ಕಾರ ಸಮಿತಿ ಸಂಚಾಲಕ ಮಲ್ಲಿಕಾರ್ಜುನ ಸಾವಕಾರ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಶರಣಪ್ಪ ಕೊಟಗಿ, ಪ್ರಕಾಶ ಬೆಂಡಿಗೇರಿ, ಚೆನ್ನಬಸಪ್ಪ ಧಾರವಾಡ ಶೆಟ್ಟರ, ಸದಾಶಿವ ಚೌಶೆಟ್ಟಿ, ಮಹಾಂತೇಶ ಗಿರಿಮಠ, ಮಹೇಶ ಚಂದರಗಿ, ಮಲ್ಲಿಕಾರ್ಜುನ ಶಿರಗುಪ್ಪಿ, ಮುರುಗೇಶ ಶೆಟ್ಟರ, ಶಂಭು ಲಕ್ಷೇ ಶ್ವರಮಠ, ಎಸ್.ಎಸ್. ಪಾಟೀಲ, ಸಿ.ವಿ. ಪಾಟೀಲ ಹಾಗೂ ಇತರರು ಇದ್ದರು.