ಜಿಲ್ಲೆ

ಪ್ರತಿಭಾ ಪುರಸ್ಕಾರ ಸಮಾರಂಭ 16ರಂದು

ಬಸವರಾಜ ವೀರಪ್ಪ ಗರಗ

ಸಂಶಿ: ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ (ರಿ) ಬೆಂಗಳೂರು ಹಾಗೂ ಕುಂದಗೋಳ ತಾಲೂಕು ಘಟಕದ ವತಿಯಿಂದ ಗ್ರಾಮದ ಶ್ರೀ ಜಗದ್ಗುರು ಫಕೀರೇಶ್ವರ ಮಠದ ಆವರಣದಲ್ಲಿ ಸೆ. 16ರಂದು ಬೆಳಗ್ಗೆ 10 ಗಂಟೆಗೆ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಶೇ. 80 ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಸಂಶಿ ಕೆಎಲ್​ಇ ಕಾಲೇಜ್ ಅಧ್ಯಕ್ಷ ಎ.ಬಿ. ಉಪ್ಪಿನ ಹೇಳಿದರು.

ಗ್ರಾಮದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಶಿರಹಟ್ಟಿ ಸಂಸ್ಥಾನಮಠದ ಶ್ರೀ ಜಗದ್ಗುರು ಫಕೀರಸಿದ್ಧರಾಮ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಫಕೀರೇಶ ಕೋರಿ ಅಧ್ಯಕ್ಷತೆ ವಹಿಸುವರು. ಬೆಳಗಾವಿ ಸಂಸದ ಜಗದೀಶ ಶೆಟ್ಟರ್, ಮಾಜಿ ವಿಪ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಕೆಎಲ್​ಇ ಸಂಸ್ಥೆ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಎಂಎಲ್​ಸಿಗಳಾದ ಎಸ್.ವಿ. ಸಂಕನೂರ, ಪ್ರದೀಪ ಶೆಟ್ಟರ್, ಹು-ಧಾ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ, ಹುಬ್ಬಳ್ಳಿಯ ಕೆಎಂಸಿಆರ್​ಐ ಅಧೀಕ್ಷಕ ಡಾ. ಈಶ್ವರ ಹಸಬಿ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ತಿಳಿಸಿದರು.

ಹುಬ್ಬಳ್ಳಿಯ ವ್ಯಾಪಾರಸ್ಥ ಚನ್ನಬಸವ ಬೆಳ್ಳಟ್ಟಿ, ಬೆಂಗಳೂರಿನ ಅಂಗಡಿ ಫೌಂಡೇಷನ್ ಚೇರ್ಮನ್ ವೀರೂಪಾಕ್ಷಪ್ಪ ಅಂಗಡಿ, ಹುಬ್ಬಳ್ಳಿಯ ಗಿಗಿ ಟೆಕ್ನಾಲಜಿಯ ಮಹಾಂತೇಶ ಹತ್ತಿ ಹಾಗೂ ಕುಂದಗೋಳದ ಓಂ ಸಾಯಿರಾಮ ಶಾಮಿಯಾನಾದ ಹನುಮಂತಪ್ಪ ಮಡಿವಾಳರ ಅವರನ್ನು ಸನ್ಮಾನಿಸಲಾಗುವುದು ಎಂದರು.

ಫಕೀರೇಶ ಕೋರಿ, ಸಚಿನ ಬಂಡಿವಾಡ, ಅಶೋಕ ಖಜ್ಜಿ, ನಾಗರಾಜ ಬೂದಿಹಾಳ, ಶಿವಾನಂದ ಹತ್ತಿ, ಶಂಭುಲಿಂಗ ಹಸಬಿ, ರೇವಪ್ಪ ಅಂಗಡಿ, ಜಯಪ್ರಕಾಶ ಗೋಣಿ, ಬಿ.ಎಸ್. ಬಿಕ್ಕದಕಟ್ಟಿ, ರಾಜು ಅಂಗಡಿ, ಪರಶುರಾಮ ಬೆಳ್ಳಟ್ಟಿ, ಮಹೇಶ ಹುರಕಡ್ಲಿ, ರೇವಪ್ಪ ಅಂಗಡಿ, ಇತರರಿದ್ದರು.