ಮಂಡ್ಯ: ಹರ್ಡೀಕರ್ ಭವನದ ಅಭಿವೃದ್ಧಿ ಹಾಗೂ ಉನ್ನತೀಕರಣಕ್ಕೆ ನೆರವು ನೀಡಲಾಗುವುದು ಎಂದು ಶಾಸಕ ರವಿಕುಮಾರ್ ಗಣಿಗ ಭರವಸೆ ನೀಡಿದರು.
ನಗರದ ಹರ್ಡೀಕರ್ ಭವನದಲ್ಲಿ ಸೆಂಟ್‌ಜಾನ್ ಆಂಬುಲೆನ್ಸ್, ಭಾರತ ಸೇವಾದಳ ಜಿಲ್ಲಾ ಸಮಿತಿ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ಅಭಿನಂದನೆ ಮತ್ತು ಡಾ.ವೈ.ಎಸ್.ರಾಮರಾವ್ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಸೇವಾಕಿರಣ ವೃದ್ದಾಶ್ರಮದ ಮೂಲಕ ವಯೋವೃದ್ದರಿಗೆ ಸಾಂತ್ವಾನ-ಪೋಷಣೆ ಮತ್ತು ಸಮಾಜಮುಖಿ ಸೇವಾಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಜಿ.ವಿ.ನಾಗರಾಜು ಅವರ ಕಾರ್ಯ ಮಾದರಿ. ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಅತ್ಯಂತ ಅಗತ್ಯವಾಗಿದೆ ಎಂದರು.
ಮಾಜಿ ಸಚಿವ ಎಂ.ಎಸ್.ಆತ್ಮಾನಂದ ಮಾತನಾಡಿದರು. ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಬಿ.ಸಿ.ಶಿವಾನಂದ ಅಧ್ಯಕ್ಷತೆ ವಹಿಸಿದ್ದರು. ಸೇವಾಕಿರಣ ಟ್ರಸ್ಟ್ ಕಾರ್ಯದರ್ಶಿ ಜಿ.ವಿ.ನಾಗರಾಜು, ಸೇವಾದಳ ಕೇಂದ್ರ ಸಮಿತಿಯ ಸದಸ್ಯ ವೈ.ಬಿ.ಬಸವರಾಜು, ಕಾಂಗ್ರೆಸ್ ಮುಖಂಡ ಎಂ.ಎಸ್.ಚಿದಂಬರ್, ಚಿತ್ರನಟ ಅಂಜನಪ್ಪ, ಸೆಂಟ್ ಜಾನ್ ಆಂಬುಲೆನ್ಸ್ ಖಜಾಂಚಿ ಸಜ್ಜನ್‌ರಾಜ್ ಕೊಠಾರಿ ಇತರರಿದ್ದರು.
ಇದೇ ವೇಳೆ ಮಾ.ಶಂ.ವರಾಹ ಹರಿ ವಿಠಲ ದಾಸರಿಗೆ ವೈ.ಎಸ್.ಆರ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಎಂ.ಎನ್.ಶ್ರೀಧರ್, ರಜನಿರಾಜ್, ಜಿ.ವಿ.ಕುಮಾರ್, ಮಂಡ್ಯ ಸತ್ಯನ್, ಎಂ.ಸ್ವಾಮಿ, ನೀನಾ ಪಟೇಲ್, ಆಯೇಷಾ ತಬಸಂ, ಡಾ.ಎಸ್.ಅನಘ, ರವಿಕಿರಣ್ ಅವರನ್ನು ಅಭಿನಂದಿಸಲಾಯಿತು. 200ಕ್ಕೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.