ವಿಜಯವಾಣಿ ಸುದ್ದಿಜಾಲ ಮಧುರೆ
ಹೋಬಳಿಯ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಹೊಂಗಿರಣ ಸಮಾನ ಮನಸ್ಕರ ಸಂಘದ ವತಿಯಿಂದ ಕನಸವಾಡಿ ಕೇಂದ್ರದ 17ನೇ ವಾರ್ಷಿಕೋತ್ಸವದಲ್ಲಿ ಪ್ರತಿಭಾ ಪುರಸ್ಕಾರ, ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮಧುರೆ ಹೋಬಳಿಯ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ನಡೆಸಲಾಯಿತು.
ರಂಗಸ್ವಾಮಿ ಅಧ್ಯಕ್ಷತೆ:
ಸಂಘದ ಅಧ್ಯಕ್ಷ ಟಿ. ರಂಗಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಕೆಂಪಣ್ಣ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಕಾಲೇಜಿನ ಪ್ರಾಂಶುಪಾಲ ಗದಿಗೆಪ್ಪ.ಬ ಹೊಸಮನಿ ಪಾಲ್ಗೊಂಡಿದ್ದರು.
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಲಕರು ಹಾಗೂ ವಿದ್ಯಾರ್ಥಿಗಳ ಪಾತ್ರದ ಬಗ್ಗೆ ಶಿಕ್ಷಣ ತಜ್ಞ ಲಕ್ಷಿ ನಾರಾಯಣ್ ಮಾಹಿತಿ ನೀಡಿದರು. ್ತ ನೀಟ್ ಸಿಇಟಿ ಮತ್ತು ಜೆಇಇ ಪ್ರವೇಶ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಮಾರ್ಗದರ್ಶನ ನೀಡಿದರು. ಶೈಕ್ಷಣಿಕ ಪ್ರಗತಿ ಸಾಧಿಸಲು ವಿವಿಧ ಶಿಕ್ಷಣ ಪಡೆಯಲು ಇರುವ ಅವಕಾಶಗಳ ಬಗ್ಗೆ ಉಪನ್ಯಾಸ ನೀಡಿದರು.
ಸಾಧಕರಿಗೆ ಸನ್ಮಾನ:
ವಿವಿಧ ಕ್ಷೇತ್ರಗಳಲ್ಲಿನ ಸಾಧಕರಾದ ಶ್ಯಾಕಲದೇವನಪುರ ಗ್ರಾಮದ ರಾಮಾಂಜಿನಪ್ಪ, ಮುದ್ದುಕೃಷ್ಣೆಗೌಡ, ಕಾಡನೂರುಪಾಳ್ಯದ ಮರೀಗೌಡ, ಚನ್ನಾದೇವಿ ಅಗ್ರಹಾರ ಗ್ರಾಮದ ಎಂ.ಹುಚ್ಚೇಗೌಡ, ಬೀರಯ್ಯನಪಾಳ್ಯದ ಬೀರಮ್ಮ, ಕಾಡನೂರು ಪಾಳ್ಯದ ಹಿತೇಶ್, ಬಂಡಯ್ಯನಪಾಳ್ಯದ ಬಿ.ಜೆ.ಪ್ರೇಕ್ಷ ಅವರನ್ನು ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳಿಗೆ ಪುರಸ್ಕಾರ:
ಪ್ರತಿ ವರ್ಷದಂತೆ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದ ಮಧುರೆ ಹೋಬಳಿಯ ಹತ್ತು ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಸಂಘದ ಸದಸ್ಯ ಜಿ.ಸುರೇಶ ಹಾಗೂ ಟಿ.ರಂಗಸ್ವಾಮಿ ಅವರು ಶಿಕ್ಷಕ ವೃತ್ತಿಯಿಂದ ನಿವೃತ್ತಿ ಹೊಂದಿದ್ದಕ್ಕಾಗಿ ಅಭಿಮಾನದ ಸನ್ಮಾನ ಮಾಡಲಾಯಿತು.