ಜಿಲ್ಲೆ

ಕಲೆಯಲ್ಲಿ ಯುವಕರು ತೊಡಗಿಸಿಕೊಳ್ಳಬೇಕು

Uttara Kannada - Subash Hegde

ಯಲ್ಲಾಪುರ:ಕಲೆ, ಸಂಘಟನೆಯಲ್ಲಿ ಯುವಕರು ಹೆಚ್ಚು ತೊಡಗಿಸಿಕೊಂಡರೆ ಕಲೆಯ ನೆಲೆ ಇನ್ನಷ್ಟು ಗಟ್ಟಿಯಾಗಲು ಸಾಧ್ಯ ಎಂದು ಮಾವಿನಮನೆ ಗ್ರಾ.ಪಂ ಅಧ್ಯಕ್ಷ ಸುಬ್ಬಣ್ಣ ಕುಂಟೆಗುಳಿ ಹೇಳಿದರು

ಅವರು ತಾಲೂಕಿನ ಬಾಸಲ ಪ್ರಾಥಮಿಕ ಶಾಲೆಯ ಸಭಾಭವನದಲ್ಲಿ ಕರ್ನಾಟಕ ಕಲಾ ಸನ್ನಿಧಿ ತೇಲಂಗಾರ ಆಶ್ರಯದಲ್ಲಿ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ತಾಳಮದ್ದಲೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

 ಅಧ್ಯಕ್ಷತೆ ವಹಿಸಿದ್ದ ಹಿರಿಯ ಅರ್ಥಧಾರಿ ಗೋಪಾಲ ಹೆಗಡೆ ಚಾವಡಿ ಮಾತನಾಡಿ, ತಾಳಮದ್ದಲೆ ವಿಶೇಷವಾದ ಕಲೆ. ಜ್ಞಾನ, ಮಾತಿನ ಕೌಶಲ್ಯ, ಪೌರಾಣಿಕ ಹಿನ್ನೆಲೆಯ ಅರಿವು ಎಲ್ಲವೂ ಇದರಿಂದ ಸಿಗುತ್ತದೆ. ಇಂತಹ ಕಲೆಯ ಪ್ರದರ್ಶನಗಳು ಹೆಚ್ಚು ಹೆಚ್ಚು ನಡೆಯುವ ಜೊತೆಗೆ, ಅದರ ಮಹತ್ವವನ್ನೂ ಸಾರುವ ಕಾರ್ಯ ಆಗಬೇಕು ಎಂದರು.