ಜಿಲ್ಲೆ

ಹಿರಿಯರನ್ನು ಸ್ಮರಿಸುವುದು ನಮ್ಮ ಸಂಸ್ಕೃತಿ : ಭಾಸ್ಕರ ರೈ ಕುಕ್ಕುವಳ್ಳಿ ಅಭಿಮತ : ಮಹಾಭಾರತ ಸರಣಿ ತಾಳಮದ್ದಳೆ

ಸೌಮ್ಯ ಆರ್

ಉಪ್ಪಿನಂಗಡಿ: ಹಿರಿಯರನ್ನು ಸ್ಮರಿಸುವುದು ನಮ್ಮ ಸಂಸ್ಕೃತಿ ಎಂದು ಮಂಗಳೂರು ಯಕ್ಷಾಂಗಣದ ಅಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದರು.

ರಾಮನಗರದಲ್ಲಿ ಶ್ರೀ ಕಾಳಿಕಾಂಬಾ ಯಕ್ಷ ಕಲಾ ಟ್ರಸ್ಟಿನ 50ನೇ ವರ್ಷದ ನಿಮಿತ್ತ ನಡೆಸುತ್ತಿರುವ ಮಹಾಭಾರತ ಸರಣಿ ತಾಳಮದ್ದಳೆ, ಪ್ರಶಸ್ತಿ ಪ್ರದಾನ ಮತ್ತು ನುಡಿನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೊಂಬೋಟು ಮನೆತನದ ಹಿರಿಯರಾದ ದಿ.ಪದ್ಮನಾಭ ಮತ್ತು ದಿ.ನೀಲಾವತಿ ಸಂಸ್ಮರಣೆ ಮಾಡಿದ ಅರ್ಥದಾರಿ ಗೋಪಾಲ ಶೆಟ್ಟಿ ಕಳೆಂಜ ಅವರಿಗೆ ನೀಲಪದ್ಮ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶ್ರೀ ರಾಮಕುಂಜೇಶ್ವರ ಪದವಿ ಕಾಲೇಜಿನ ಪ್ರಾಂಶುಪಾಲ ಗಣರಾಜ ಕುಂಬ್ಳೆ ಅವರು ಪಾತಾಳ ವೆಂಕಟರಮಣ ಭಟ್ ಮತ್ತು ವೈದ್ಯ ಕೆ.ಶೀನಪ್ಪ ಶೆಟ್ಟಿ ಅವರಿಗೆ ನುಡಿನಮನ ಅರ್ಪಿಸಿದರು.

ಉಮೇಶ್ ಶೆಣೈ ರಾಮನಗರ, ಪಾತಾಳ ಅಂಬಾ ಪ್ರಸಾದ್, ಉಪ್ಪಿನಂಗಡಿ ಪಟ್ಲ ಫೌಂಡೇಶನ್ ಘಟಕದ ಅಧ್ಯಕ್ಷ ಕೆ.ಜಗದೀಶ ಶೆಟ್ಟಿ, ದೇವದಾಸ ಎಸ್.ಪಿ.ಹರಿಹರ, ಡಾ.ಸುರೇಶ್ ಶೆಟ್ಟಿ ಮಂಗಳೂರು, ರಾಮಚಂದ್ರ ಮಣಿಯಾಣಿ, ಚಂದ್ರಶೇಖರ ಮಡಿವಾಳ, ಕೈಲಾರ್ ರಾಜಗೋಪಾಲ ಭಟ್, ಯು.ಜಿ.ರಾಧಾ, ಜಯಂತ ಪುರೋಳಿ, ಸುರೇಶ ಪುತ್ತೂರಾಯ, ಸುಬ್ರಹ್ಮಣ್ಯ ರಾವ್ ಬಿ., ಶ್ರೀಪತಿ ಭಟ್ ಉಪ್ಪಿನಂಗಡಿ, ಸಂಜೀವ ಪಾರೆಂಕಿ, ಗಂಗಾಧರ, ಸುರೇಶ್ ರಾವ್ ಬಿ., ಸುಧಾಕರ ಕೋಟೆ, ಶ್ರೀಧರ ಭಟ್ ಕೆ., ನೀರಜ್ ಕುಮಾರ್, ಹರೀಶ ಆಚಾರ್ಯ ಪುಳಿತ್ತಡಿ, ಆಶಾಲತಾ ಕಲ್ಲೂರಾಯ, ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ, ಭಾರತಿ ಎಂ.ಎಲ್., ಪವಿತ್ರಾಕ್ಷಿ, ರವೀಂದ್ರ ದರ್ಬೆ, ಸತೀಶ ಶಿರ್ಲಾಲು, ಹರೀಶ್ ಆಚಾರ್ಯ ಮದ್ದಡ್ಕ, ರಾಜೇಶ ಪ್ರಭು, ಗೀತಾ ಕುದ್ದಣ್ಣಾಯ, ಗುರುಮೂರ್ತಿ ಅಮ್ಮಣ್ಣಾಯ, ಪ್ರಚೇತಾ ಆಳ್ವ, ಶೃತಿ ವಿಸ್ಮಿತ್, ನಿತೀಶ್ ಮನೋಳಿತ್ತಾ ಯ, ಪ್ರಕಾಶ ಅಭ್ಯಂಕರ್, ಅರ್ಜುನ ಅಭ್ಯಂಕರ್, ದುಶ್ಯಂತ್ ಕೃಷ್ಣಾಪುರ ಮೊದಲಾದವರಿದ್ದರು.

ಕಾಳಿಕಾಂಬಾ ಟ್ರಸ್ಟಿನ ಸಹ ಕಾರ್ಯದರ್ಶಿ ಪದ್ಮನಾಭ ಕುಲಾಲ್ ಇಳಂತಿಲ ಸ್ವಾಗತಿಸಿದರು. ಟ್ರಸ್ಟಿನ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ನಿರೂಪಿಸಿದರು. ಶಿಕ್ಷಕಿ ಪುಷ್ಪಾ ತಿಲಕ್ ವಂದಿಸಿದರು. ಬಳಿಕ ಅತಿಥಿ ಕಲಾವಿದರಿಂದ ಭೀಷ್ಮ ಸೇನಾಧಿಪತ್ಯ ತಾಳಮದ್ದಳೆ ಜರುಗಿತು.