ಜಿಲ್ಲೆ

ಯಕ್ಷಗಾನದಿಂದ ಪಾಪ-ಪುಣ್ಯದ ಪ್ರಜ್ಞೆ : ಸ್ವಸ್ತಿಶ್ರೀ ಚಾರುಕೀರ್ತಿ ಸ್ವಾಮೀಜಿ ಶುಭನುಡಿ

ಸೌಮ್ಯ ಆರ್

ಮೂಡುಬಿದಿರೆ: ಮೂಡುಬಿದಿರೆ ಜೈನಮಠದ ಭಟ್ಟಾರಕ ಸಭಾಭವನದಲ್ಲಿ ಸ್ವಸ್ತಿಶ್ರೀ ಚಾರುಕೀರ್ತಿ ಯಕ್ಷ ಕಲಾ ಬಳಗದ 2025ರ ಸರಣಿ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ನಡೆಯಿತು.

ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಚಾರ್ಯವರ್ಯ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ, ಯಕ್ಷಗಾನ ಮಾನವ ಜೀವನದಲ್ಲಿ ಸದಾಚಾರಿಯಾಗಲು ಸತ್ಯ, ನಿಷ್ಠೆಯಿಂದ ಬೆಳೆಯಲು ಸಹಕಾರಿಯಾಬಲ್ಲದು. ಪೌರಣಿಕ ಕಥನಗಳನ್ನು ಅರಿತು, ಪಾಪ ಪುಣ್ಯದ ಬಗ್ಗೆ ತಿಳಿಸುವಲ್ಲಿಯೂ ಯಕ್ಷಗಾನ ನೆರವಾಗುತ್ತದೆ ಎಂದರು.

ವಕೀಲರಾದ ಎಂ.ಬಾಹುಬಲಿ ಪ್ರಸಾದ್, ಕೆ.ಆರ್.ಪಂಡಿತ್, ಬಸದಿ ಮೊಕ್ತೇಸರ ಪಟ್ಣಶೆಟ್ಟಿ ಸುಧೇಶ್ ಕುಮಾರ್, ಪ್ರಮುಖರಾದ ಪ್ರವೀಣ್ ಇಂದ್ರ, ಸೋಮಶೇಖರ್ ಉಜಿರೆ, ಪ್ರವೀಣ್ ಚಂದ್ರ, ವೀರೇಂದ್ರ ಇಂದ್ರ, ಮುನಿರಾಜ್ ರೆಂಜಾಳ, ಜಬ್ಬಾರ್ ಸಮೋ ಪಶುಪತಿ ಶಾಸ್ತ್ರಿ, ಗಣೇಶ್ ಕನ್ನಡಿಕಟ್ಟೆ, ದೇವಾನಂದ ಭಟ್, ರವಿರಾಜ್ ಜೈನ್, ಪ್ರಕಾಶ್ ಗಟ್ಟಿ, ಸೂರ್ಯನಾರಾಯಣ ಭಟ್, ಬಾಲ ಕೃಷ್ಣ ಭಟ್ ಪುತ್ತಿಗೆ, ಪ್ರಸಾದ್ ಉಪಸ್ಥಿತರಿದ್ದರು.

ಡಾ.ಪ್ರಭಾತ್ ಬಲ್ನಾಡ್ ನಿರೂಪಿಸಿದರು. ಮಠದ ವ್ಯವಸ್ಥಾಪಕ ಸಂಜಯಂತ ಕುಮಾರ್ ಸ್ವಾಗತಿಸಿದರು. ಶ್ರೀ ನೇಮಿ ಜಿನ ಚರಿತ್ರೆ ಹಾಗೂ ಶಲ್ಯ ಸಾರಥ್ಯ ತಾಳಮದ್ದಳೆ ನಡೆಯಿತು.