ಜಿಲ್ಲೆ

ಕೀರಿಕ್ಕಾಡಲ್ಲಿ ಮಹಿಳಾ ತಂಡದ ತಾಳಮದ್ದಳೆ

ಸೌಮ್ಯ ಆರ್

ಮುಳ್ಳೇರಿಯ: ದೇಲಂಪಾಡಿ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಮಂದಿರದ ಕೀರಿಕ್ಕಾಡು ಸ್ಮಾರಕ ಸಭಾ ಭವನದಲ್ಲಿ ಹಿರಿಯ ಭಾಗವತ ವಿಶ್ವವಿನೋದ ಬನಾರಿ ಮಾರ್ಗದರ್ಶನದಲ್ಲಿ ನಾರಾಯಣ ದೇಲಂಪಾಡಿ ಅರ್ಥಸಾಹಿತ್ಯವನ್ನೊಳಗೊಂಡ ಮಾರಣಾಧ್ವರ ಯಕ್ಷಗಾನ ತಾಳಮದ್ದಳೆ ಎಂ. ರವಾನಂದ ರೈ ದೇಲಂಪಾಡಿ ನಿರ್ದೇಶನದಲ್ಲಿ ರಾಮನಾಯ್ಕ ದೇಲಂಪಾಡಿ ಸಹಕಾರದೊಂದಿಗೆ ಹಿರಿಯ ಮಹಿಳಾ ಸದಸ್ಯರರಿಂದ ಶನಿವಾರ ಪ್ರಸ್ತುತಗೊಂಡಿತು.

ಭಾಗವತಿಕೆಯಲ್ಲಿ ನಿತೀಶ್ ಕುವಾರ್ ಎಂಕಣ್ಣಮೂಲೆ, ವಿದ್ಯಾಶ್ರೀ ಆಚಾರ್ಯ ಈಶ್ವರಮಂಗಲ, ಸಾಯಿ ನಕ್ಷತ್ರ ಪೆರಾಜೆ ಪ್ರಸಂಗ ಸಹಕರಿಸಿದರು. ಚೆಂಡೆಮದ್ದಳೆಯಲ್ಲಿ ಶ್ರೀಧರ ಆಚಾರ್ಯ ಈಶ್ವರಮಂಗಲ, ಅಪ್ಪಯ್ಯ ಮಣಿಯಾಣಿ ಮಂಡೆಕ್ಕೋಲು, ವಿಷ್ಣುಶರಣ ಬನಾರಿ, ಬಿ.ಎಚ್. ಕೃಷ್ಣಪ್ರಸಾದ ಬೆಳ್ಳಿಪ್ಪಾಡಿ, ಸದಾನಂದ ಮಯ್ಯಾಳ ಮತ್ತು ನಾರಾಯಣ ಪಾಟಾಳಿ ಮಯ್ಯಾಳ, ಶ್ರೀದೇವ್ ಈಶ್ವರಮಂಗಲ ಚಕ್ರತಾಳದಲ್ಲಿ ಸಹಕರಿಸಿದರು.

ಅರ್ಥಧಾರಿಗಳಾಗಿ ಸರಿತಾ ರಮಾನಂದ ರೈ ದೇಲಂಪಾಡಿ, ಪವಿತ್ರಾ ದಿವಾಕರ ಗೌಡ ಮುದಿಯಾರು, ಪ್ರೇಮಾ ಮನೋಹರ ಬಂದ್ಯಡ್ಕ, ಜಲಜಾಕ್ಷಿ ಸತೀಶ್ ರೈ ಬೆಳ್ಳಿಪ್ಪಾಡಿ, ಸುಮಲತಾ ಉದಯ ಕುವಾರ್ ದೇಲಂಪಾಡಿ, ಸುಜಾತಾ ಮೋಹನದಾಸ್ ರೈ ದೇಲಂಪಾಡಿ, ಕುಸುಮಾ ಜಯಪ್ರಕಾಶ ಕುತ್ತಿಮುಂಡ, ಶೀಲಾ ಹೇಮನಾಥ ಕೇದಗಡಿ, ಶಾಂತಾಕುಮಾರಿ ದೇಲಂಪಾಡಿ ಪಾತ್ರಗಳನ್ನು ನಿರ್ವಹಿಸಿದರು. ಪೂಜಾ ಸಿ.ಎಚ್. ಸ್ವಾಗತಿಸಿದರು. ನಂದಕಿಶೋರ ಬನಾರಿ ವಂದಿಸಿದರು.

ದೇವರಿಗೆ ಪೂಜಾರ್ಚನೆ

ತಾಳಮದ್ದಳೆಗೂ ಮೊದಲು ಚೈತ್ರಾ ರಮೇಶ್, ಸಾಯಿನಕ್ಷತ್ರ ಮಜಿಕೋಡಿ ಹಾಗೂ ಮನೆಯವರ ವತಿಯಿಂದ ನಡೆದ ಕಾರ್ಯಕ್ರಮಕ್ಕೂ ಮುನ್ನ ಸ್ಥಳ ಸಾನ್ನಿಧ್ಯ ಶ್ರೀ ಗೋಪಾಲಕೃಷ್ಣ ದೇವರಿಗೆ ಪೂಜಾರ್ಚನೆ ಸಲ್ಲಿಸಲಾಯಿತು. ಶಾಂತಾಕುವಾರಿ ದೇಲಂಪಾಡಿ, ಪೂರ್ಣಿಮಾ ಬನಾರಿ, ಪೂಜಾ ಸಿ.ಎಚ್., ಗುರುತ್ವಿಕ್, ಸಚಿತ್, ಹನ್ವಿತ್, ಅತಿಥಿ, ಶ್ರೀವಾಣಿ, ಮನ್ವಿತಾ, ಸ್ವಾತಿ, ಹನಿ, ಲಕ್ಷ, ಶ್ರವಿ, ರಕ್ಷಾ ಮತ್ತು ಈಶ್ವರಿ ಪ್ರಕೃತಿ ಭಗವದ್ಗೀತೆ ಪಾರಾಯಣ ನಡೆಸಿದರು.